ಆ ವ್ಯಕ್ತಿ ಇಂತಹ ಕೆಲಸಗಳಿಗೆ ಕೈಹಾಕುವವರಲ್ಲ – ಡಿಕೆಶಿ ಪರ ಬ್ಯಾಟ್ ಬೀಸಿದ ಸಚಿವ ಜೆ.ಸಿ ಮಾಧುಸ್ವಾಮಿ….

 

ಬೆಂಗಳೂರು,ಮಾರ್ಚ್,27,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಹೆಸರು ಥಳಕು ಹಾಕಿಕೊಂಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಜೆ.ಸಿ ಮಾಧುಸ್ವಾಮಿ  ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.jk

ಹೌದು, ಈ ಕುರಿತು ಮಾತನಾಡಿರುವ ಸಚಿವ ಜೆ.ಸಿ ಮಾಧುಸ್ವಾಮಿ, ಡಿಕೆ ಶಿವಕುಮಾರ್ ರನ್ನ ನಾನು ಬಲ್ಲೆ, ಅವರು ಅಂಥವರಲ್ಲ. ಆ ವ್ಯಕ್ತಿ ಇಂತಹ ಕೆಲಸಗಳಿಗೆ ಕೈಹಾಕುವವರಲ್ಲ. ಅವರದ್ದೇನಿದ್ದರೂ ನೇರಾನೇರ, ಗುಂಡು ಹೊಡೆದಂಗೆ ಎಂದು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದರು.

ಸಚಿವ ಸುಧಾಕರ್ ಅವರ ಏಕ ಪತ್ನಿವ್ರತಸ್ಥ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಸಚಿವ ಸುಧಾಕರ್ ಅವರು ಉದ್ವೇಗದಲ್ಲಿ ಆ ರೀತಿ ಹೇಳಿಕೆ ನೀಡಿದ್ದಾರೆ. ಅದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಆ ಹೇಳಿಕೆಗೆ ಕ್ಷಮಾಪಣೆಯನ್ನೂ ಸಹ ಕೇಳಿದ್ದಾರೆ. ಅದನ್ನು ಮುಂದುವರೆಸುವ ಅವಶ್ಯಕತೆ ಇಲ್ಲ ಎಂದರು.ramesh jarkiholi –CD CASE- Minister- JC Madhuswamy -batting –DK shivakumar

ಅಂತರ್ಜಲ ಹೆಚ್ಚಿಸಿ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದೆ….

ಅಂತರ್ಜಲ ಹೆಚ್ಚಿಸಿ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ನೀರು ಸಂಗ್ರಹ ಕಟ್ಟೆಗಳನ್ನು ನಿರ್ಮಾಣ ಮಾಡಿ ಅಂತರ್ಜಲಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಬೆಂಗಳೂರಿನ ಒಳಚರಂಡಿ ನೀರನ್ನು ಶುದ್ಧೀಕರಿಸಿ ತುಮಕೂರು ಕೋಲಾರ ಸೇರಿದಂತೆ ವಿವಿಧ ನೆರೆ ಜಿಲ್ಲೆಗಳ ಕೆರೆಯ ನೀರು ತುಂಬಿಸುವ ಕಾರ್ಯ ಮಾಡಲಾಗುವುದು. ಇದರಿಂದ ನೆಲಮಂಗಲದಲ್ಲಿ 100 ಕೆರೆ, ದೊಡ್ಡಬಳ್ಳಾಪುರದಲ್ಲಿ 100 ಕೆರೆ, ತುಮಕೂರಲ್ಲಿ 12 ಕೆರೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾಗಿ ಸಿಗುವ ಒಳಚರಂಡಿ ನೀರುಗಳನ್ನು ಶುದ್ಧೀಕರಿಸಿ ಕೆರೆ ತುಂಬಿಸುವ ಕಾರ್ಯ ಮಾಡಲಿದ್ದೇವೆ. ಇದರಿಂದ ಅಂತರ್ಜಲ, ಹೆಚ್ಚಾಗಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ದಕ್ಷಿಣ ಕರ್ನಾಟಕದ ಪಶ್ಚಿಮವಾಹಿನಿ ನದಿಗಳ ಅಡ್ಡಲಾಗಿ ಸಾವಿರದ ನಾನೂರು ಡ್ಯಾಮ್ ಕಟ್ಟಲಾಗುವುದು ಅದಕ್ಕೆ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಯೋಜನೆಗೆ 500 ಕೋಟಿ ವೆಚ್ಚ ತಗುಲಲಿದೆ ಈಗಾಗಲೇ 300 ಕೋಟಿಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಕಾರವಾರದಲ್ಲಿ ಕಾರ್ಲ್ಯಾಂಡ್ ಯೋಜನೆ ಮುಖಾಂತರ ಸಮುದ್ರದ ಉಪ್ಪಿನ ನೀರು ಸಿಹಿನೀರು ಒಂದಾಗದಂತೆ ಅಡ್ಡಲಾಗಿ ಕಾಲುವೆಗಳನ್ನು ನಿರ್ಮಾಣ ಮಾಡಲಾಗುವುದು ಅದಕ್ಕೆ ಸಾವಿರದ ಐನೂರು ಕೋಟಿ ರೂ ತಗುಲಲಿದೆ. ಅಂಕೋಲದಲ್ಲಿ ಉಪ್ಪು ತಯಾರಿಕೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಕೇಂದ್ರದ ಅಟಲ್ ಪೂಜಾಲ್ ಯೋಜನೆ ಮೂಖಾತರ ರಾಜ್ಯದ 41 ತಾಲ್ಲೂಕುಗಳಲ್ಲಿ ಅಂತರ್ಜಲ ಹೆಚ್ಚಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಇಲಾಖೆಯ ಯೋಜನೆಗಳ ಕುರಿತು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

Key words: ramesh jarkiholi –CD CASE- Minister- JC Madhuswamy -batting –DK shivakumar