ರಮೇಶ್ ಜಾರಕಿಹೋಳಿ ಸಿಡಿ ಕೇಸ್, ಡಿಕೆಶಿ ಮಾಡಿದ್ದಾರೆ ಅಂತ ಯಾರಾದರು ಹೇಳಿದ್ದಾರ? :  ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕೆ

ಮೈಸೂರು,ಮಾರ್ಚ್,14,2021(www.justkannada.in) : ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ. ಡಿಕೆಶಿ ಅವರ ಹೆಸರು ಯಾರು ಹೇಳಿದ್ದಾರೆ. ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತ ಯಾರಾದರು ಹೇಳಿದ್ದಾರ? ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.jkಡಿ.ಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್

ರಮೇಶ್ ಜಾರಕಿಹೋಳಿ ಸಿಡಿ ಕೇಸ್ ಡಿಕೆಶಿ ಹೆಸರು ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳಿಯುತ್ತಿದ್ದಾರೆ. ಯಾವ ಮಹಾನ್ ನಾಯಕರು ಅಂತ ಹೇಳಿದ್ದಾರೆ ಗೊತ್ತಿಲ್ಲ. ಇವರು ತಾವೆ ಅಂತ ಯಾಕೆ ಅಂದುಕೊಂಡರು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್ ಎಂದಿದ್ದಾರೆ.

ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ

ಡಿಕೆಶಿ ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನ ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ, ಗೊತ್ತಿಲ್ಲ. ಈ ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು

ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಕೆ ಮಾಡಬೇಕು. ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದೆ. ಆ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಕ್ಕಿದೆ ಎಂದು ಹೇಳಿದರು.

ಸಂತ್ರಸ್ತೆಗೆ ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ

ಸರ್ಕಾರದಿಂದ ಅವಳನ್ನು ಹುಡುಕಲು ಆಗದಿದ್ದರೂ, ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ. ನಿನ್ನೆ ಆಕೆ ಸರ್ಕಾರಕ್ಕೆ ವೀಡಿಯೋ ರೆಕಾರ್ಡ್ ಕಳುಹಿಸಿದ್ದಾಳೆ. ಬೇರೆ ಯಾರಾದರು ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ತನಿಕೆಯಿಂದ ಹೊರ ಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ವಿರುದ್ಧ ಇರೋರು ಕೊಟ್ಟಿದ್ದಾರೊ ಗೊತ್ತಿಲ್ಲ. ಸರ್ಕಾರ ರಚನೆಗೆ ಈತನ ಸಹಾಯ ಪಡೆದವರು ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ತನಿಖೆ ಸರ್ಕಾರದಿಂದ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ

Ramesh jarakiholi-CD Case-Dkshi-Anyone-Told me-Former CM-H.D.Kumaraswamy  

ಯಾವುದೇ ತನಿಖೆ ಸರ್ಕಾರದಿಂದ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಡೀ ದೇಶದ ವ್ಯವಸ್ಥೆ ಅದೇ ರೀತಿ ಇದೆ. ಯಾರನ್ನಾದರೂ ರಾಜಕೀಯವಾಗಿ ಮುಗಿಸುವಾಗ ಸಣ್ಣಪುಟ್ಟ ತಪ್ಪು ಮುಂದಿಟ್ಟುಕೊಂಡು ಅಧಿಕಾರದವರು ತಾತ್ಕಾಲಿಕವಾಗಿ ಬೆಳವಣಿಗೆ ಕುಂಟಿತ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತದೆಯೋ, ಇಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುವುದೋ ಗೊತ್ತಿಲ್ಲ?

ಇಂತಹ ವ್ಯವಸ್ಥಿತ ಬೆಳವಣಿಗೆ ದೇಶದಲ್ಲಿ ಕಂಡಿದ್ದೇವೆ. ಈಗಲೂ ಅದೇ ರೀತಿ ನಡೆಯುತ್ತಿದೆ. ಇಲ್ಲಿ ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತದೆಯೋ, ಇಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುವುದೋ ಗೊತ್ತಿಲ್ಲ. ಇಲ್ಲಿ ಯಾರನ್ನು ನಾನು ಸಂತ್ರಸ್ತರು ಎನ್ನೋದು ಎಂದು ಪ್ರಶ್ನಿಸಿದ್ದಾರೆ.

key words : Ramesh jarakiholi-CD Case-Dkshi-Anyone-Told me-Former CM-H.D.Kumaraswamy