ಶಿವರಾತ್ರಿಗೆ ರಮೇಶ್ ಅರವಿಂದ್ 101ನೇ ಚಿತ್ರ ‘ಶಿವಾಜಿ ಸುರತ್ಕಲ್’ ಬಿಡುಗಡೆ

ಬೆಂಗಳೂರು, ಜನವರಿ 1, 2019 (www.justkannada.in): ರಮೇಶ್ ಅರವಿಂದ್ ನಟಿಸಿರುವ ಶಿವಾಜಿ ಸುರತ್ಕಲ್ ಚಿತ್ರವು ಫೆಬ್ರವರಿ 21ರಂದು ಬಿಡುಗಡೆಯಾಗಲಿದೆ.

ಈ ಸಿನಿಮಾವು ಶಿವರಾತ್ರಿ ದಿನದಂದು ಬಿಡುಗಡೆಯಾಗಲಿದ್ದು, ರಮೇಶ್ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ತನಿಖಾ ಪೊಲೀಸ್ ಅಧಿಕಾರಿಯಾಗಿ ಎರಡು ವಿಧದಲ್ಲಿ ಕಾಣಿಸುವರು.

ಆಕಾಶ್ ಶ್ರೀವಾಸ್ತ ಅವರು ಈ ಸಿನಿಮಾ ನಿರ್ದೇಶನ ಮಾಡಿರುವರು. ಇದು ರಮೇಶ್ ಅರವಿಂದ್ ಅವರು 101ನೇ ಸಿನಿಮಾವಾಗಿದೆ. ಇದೊಂದು ಕೊಲೆ ರಹಸ್ಯದ ಕಥೆಯನ್ನು ಹೊಂದಿದೆ.