ಮತ್ತೆ ದಾಖಲೆ ಬರೆದ ಎಂಭತ್ತರ ದಶಕದ ರಾಮಾಯಣ

kannada t-shirts

ಬೆಂಗಳೂರು, ಮೇ 01, 2020 (www.justkannada.in): ಏಪ್ರಿಲ್​ 16ರಂದು ಪ್ರಸಾರವಾದ ‘ರಾಮಾಯಣ’ ಎಪಿಸೋಡ್​ ಬರೋಬ್ಬರಿ 7.7 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಧಾರಾವಾಹಿ ಎನ್ನುವ ಖ್ಯಾತಿಗೆ ರಾಮಾಯಣ ಪಾತ್ರವಾಗಿದೆ.

1987-88ರ ಅವಧಿಯಲ್ಲಿ ‘ರಾಮಾಯಣ’ ಧಾರವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡು ಹೊಸ ಅಲೆ ಸೃಷ್ಟಿಸಿತ್ತು. ಈ ಧಾರಾವಾಹಿ ಈಗ ಮರು ಪ್ರಸಾರಗೊಂಡಿದ್ದು ವಿಶ್ವ ದಾಖಲೆಯನ್ನೇ ಬರೆದಿದೆ.

ಲಾಕ್​ಡೌನ್​ ಆದೇಶ ಬಂದ ನಂತರ ‘ರಾಮಾಯಣ’ ಮರು ಪ್ರಸಾರಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕ್ಯಾಂಪೇನ್​ಗಳು ಕೂಡ ನಡೆದವು. ಈ ಹಿನ್ನೆಲೆಯಲ್ಲಿ ಡಿಡಿ ಮಾರ್ಚ್​ 28ರಂದು ರಾಮಾಯಣ ಮರು ಪ್ರಸಾರ ಆರಂಭಿಸಿತ್ತು. 1987, ಜನವರಿ 25ರಿಂದ 1988 ಜುಲೈ 31ರವರೆಗೆ ರಾಮಾಯಾಣ ಪ್ರಸಾರಗೊಂಡಿತ್ತು.

website developers in mysore