ಗ್ರಾಮಪಂಚಾಯತಿ ಚುನಾವಣೆಗೆ ಸಿದ್ದತೆ ಆರಂಭ: ಆಗಸ್ಟ್ 31 ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟ…

ಬೆಂಗಳೂರು,ಆ,11,2020(www.justkannada.in):  ಕೊರೋನಾ ಹಾವಳಿ ಲಾಕ್ ಡೌನ್ ನಿಂದಾಗಿ ಮುಂದೂಡಿಕೆಯಾಗಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಇದೀಗ ಸಿದ್ದತೆ ಆರಂಭವಾಗಿದೆ.jk-logo-justkannada-logo

ಮತದಾರ ಪಟ್ಟಿ ಸಿದ್ದತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ  ಪತ್ರ ಬರೆದಿದ್ದು, ಈ ಹಿನ್ನೆಲೆ ಕರಡು ಮತದಾರ ಪಟ್ಟಿ ಪ್ರಕಟಣೆ ಮಾಡಲಾಗಿದೆ.  ಈ ಸಂಬಂಧ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಮತದಾರ ಪಟ್ಟಿ ಪ್ರಕಟಗೊಳಿಸಲು ಅಯಾ ಜಿಲ್ಲೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಆಗಸ್ಟ್ 14 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು , ಆಗಸ್ಟ್ 31 ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಗೊಳ್ಳಲಿದೆ. ಗ್ರಾಮಪಂಚಾಯತ್ ಚುನಾವಣೆ ಈಗಾಗಲೇ ನಡೆಯಬೇಕಿತ್ತು. ಆದರೇ  ಕೋವಿಡ್ ಕಾರಣದಿಂದ ಚುನಾವಣಾ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.rama-panchayath-elections-final-voter-list-published-august-31st

ಇದೀಗ ಜಿಲ್ಲಾಡಳಿತ ಗ್ರಾಮಪಂಚಾಯ್ತಿವಾರು ಮೀಸಲಾತಿ ಪಟ್ಟಿ ತಯಾರಿಸಿ  ರಾಜ್ಯ ಚುನಾವಣಾ ಆಯೋಗಕ್ಕೆ ಮೀಸಲಾತಿ ಪಟ್ಟಿಯನ್ನ ಕಳುಹಿಸಿದೆ. ಮೀಸಲಾತಿ ಪಟ್ಟಿ ಸಿದ್ದಗೊಂಡ ಬೆನ್ನಲ್ಲೇ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು,  ಲೋಕಲ್ ವಾರ್  ಸಜ್ಜುಗೊಳ್ಳಲಾಗುತ್ತಿದೆ.

Key words:  Grama Panchayath- elections-Final -Voter List –Published- August 31st.