ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ-ಜೆಡಿಎಸ್ ಶಾಸಕನ ವಿರುದ್ದ ಹೆಚ್.ಡಿಕೆ ಗರಂ.

Promotion

ಬೆಂಗಳೂರು,ಜೂನ್,10,2022(www.justkannada.in):   ಇಂದು ನಡೆಯುತ್ತಿರುವ  ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾನ ಮಾಡಿರುವುದಾಗಿ ಹೇಳಿಕೆ ನೀಡಿದ ಜೆಡಿಎಸ್ ಶಾಸಕ ಶ್ರೀನಿವಾಸ್​ಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ  ಮಾಜಿ ಸಿಎಂ ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ. ರಾಜೀನಾಮೆ ನೀಡಿ ಹೋಗಲಿ.  ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮ ಅಗತ್ಯವಿಲ್ಲ. ಈ ರೀತಿಯಾಗಿ ಮಾಡಿ ಜನರ ಮುಂದೆ ಹೇಗೆ ಹೋಗುತ್ತಾರೆ ಎಂದು  ಕಿಡಿಕಾರಿದರು.

ಇಬ್ಬರು ಅಡ್ಡ ಮತದಾನದ ನಿರೀಕ್ಷೆ ಮೊದಲೇ ಇತ್ತು. ಜೆಡಿಎಸ್​ಗೆ ಮತ ಹಾಕುತ್ತೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿ ಈ ರೀತಿ ಮಾಡಿದ್ದಾರೆ. ಇಲ್ಲಿಂದ ಹೊಸ ರಾಜಕೀಯ ಚಾಪ್ಟರ್ ಶುರು ಆಗುತ್ತದೆ. ಜನ ಹೊಸ ಚಾಪ್ಟರ್ ಶುರು ಮಾಡುತ್ತಾರೆ. 8ರಿಂದ 10 ಜನ ಅಡ್ಡ ಮತದಾನ ಮಾಡುತ್ತಾರೆ ಎನ್ನುವ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನ ಕಾಂಗ್ರೆಸ್​ ಗೆ ಗೂಟ ಹೊಡೆಯುತ್ತಾರೆ ಎಂದು ಹೆಚ್.ಡಿಕೆ ಹರಿಹಾಯ್ದರು.

Key words: rajyasabha-election-HD Kumaraswamy- against -JDS MLA