ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ ಅಸಿಂಧು ಮಾಡುವಂತೆ ದೂರು.

kannada t-shirts

ಬೆಂಗಳೂರು,ಜೂನ್,10,2022(www.justkannada.in): ಇಂದು ರಾಜ್ಯಸಭಾ  ಚುನಾವಣಾ ಮತದಾನ ನಡೆಯುತ್ತಿದ್ದು ಈ ನಡುವೆ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರ ಮತವನ್ನ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ದೂರು ನೀಡಿವೆ.

ವಿಧಾನಸೌಧದದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಈ ನಡುವೆ ವೊಟಿಂಗ್  ಬಳಿಕ ಹೆಚ್.ಡಿ ರೇವಣ್ಣ ಅವರು ಮತ ಹಾಕಿದ್ದನ್ನ ಡಿ.ಕೆ ಶಿವಕುಮಾರ್ ಅವರಿಗೆ ತೋರಿಸಿದ್ದಾರೆ. ಹೆಚ್.ಡಿ ರೇವಣ್ಣ ಮತವನ್ನ ಡಿಕೆ ಶಿವಕುಮಾರ್ ಗೆ ಪ್ರದರ್ಶಿಸಿದ್ದಾರೆ. ಹೀಗಾಗಿ  ಹೆಚ್.ಡಿ ರೇವಣ್ಣರ ಮತವನ್ನ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಪೊಲೀಸ್ ಏಜೇಂಟ್ ಪ್ರಕಾಶ್ ರಾಥೊಡ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಡಿ ರೇವಣ್ಣ, ನಾನು ಮತ ಹಾಕುವುದನ್ನ ಡಿಕೆಶಿಗೆ ಯಾಕೆ ತೋರಿಸಲಿ ನಾನು ಮತ ಹಾಕಿದ್ದನ್ನ ಯಾರಿಗೂ ತೋರಿಸಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: rajyasabha-election- Former minister -HD Revanna -complains -voting

website developers in mysore