ರಾಜ್ಯಸಭೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರ: ಹಾಲಿ ಸದಸ್ಯ ಪ್ರಭಾಕರ್ ಕೋರೆ ಪ್ರತಿಕ್ರಿಯಿಸಿದ್ದು ಹೀಗೆ….

rajya-sabha-election-bjp-ticket-prabhakar-core-reaction
Promotion

ಬೆಂಗಳೂರು,ಜೂ,8,2020(www.justkannada.in0:  ರಾಜ್ಯಸಭಾ ಚುನಾವಣೆ ಹಿನ್ನೆಲೆ  ಬಿಜೆಪಿ ಹೈಕಮಾಂಡ್ ಇಬ್ಬರು ಹೊಸಮುಖಗಳಿಗೆ ಮಣೆ ಹಾಕಿದ್ದು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರಿಗೆ ನಿರಾಸೆಯಾಗಿದೆ.rajya-sabha-election-bjp-ticket-prabhakar-core-reaction

ಜೂನ್ 19 ರಂದು ನಡೆಯುವ ರಾಜ್ಯಸಭೆ ಚುನಾವಣೆ ಹಿನ್ನೆಲೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಇನ್ನು ತಮಗೆ ಟಿಕೆಟ್ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿರುವ ಪ್ರಭಾಕರ್ ಕೋರೆ, ಪಕ್ಷದ ಹೈಕಮಾಂಡ್ ತೀರ್ಮಾನವನ್ನ ಸ್ವಾಗತಿಸುವೆ. ನಾನು 3ನೇ ಬಾರಿಗೆ ಆಯ್ಕೆಯಾಗಲು ಟಿಕೆಟ್ ಕೇಳಿದ್ದೆ. ಆದ್ರೆ ಪಕ್ಷದ ಕಾರ್ಯಕರ್ತರಿಗೆ  ಅವಕಾಶ ನೀಡಿದ್ದಾರೆ.  ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ತಿಳಿಸಿದ್ದಾರೆ.

Key words: Rajya Sabha –election-BJP- ticket -Prabhakar Core-reaction