ಉದ್ಯೋಕಾಂಕ್ಷಿಗಳಿಗೆ ವರದಾನ! ‘ರಾಜ್’ಕುಮಾರ್ ಲರ್ನಿಂಗ್ ಆ್ಯಪ್’ ಬಿಡುಗಡೆ

ಬೆಂಗಳೂರು, ಆಗಸ್ಟ್ 17, 2021 (www.justkannada.in): ರಾಜ್​ ಕುಟುಂಬ​ ‘ರಾಜ್​ಕುಮಾರ್​ ಲರ್ನಿಂಗ್ ಆ್ಯಪ್ ಬಿಡುಗಡೆ ಮಾಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾಗಿರುವ ಡಾ.ರಾಜ್ ಕುಟುಂಬ ಈ ವಿಶೇಷ ಆ್ಯಪ್ ರೂಪಿಸಿದ್ದು, ಅದನ್ನು ನೆನ್ನೆ ಲೋಕಾರ್ಪಣೆ ಮಾಡಲಾಗಿದೆ. ಲರ್ನಿಂಗ್ ಆ್ಯಪ್ ಪರಿಚಯಿಸಿದ ರಾಜ್​ಕುಮಾರ್​ ಕುಟುಂಬ, ಆನ್​ಲೈನ್​ ಶಿಕ್ಷಣದತ್ತ ಹೊಸ ಹೆಜ್ಜೆ ಇರಿಸಿದೆ.

ಯುಪಿಎಸ್​ಇ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡಲು ರಾಜ್​ಕುಮಾರ್​ ಕುಟುಂಬದ ಅಕಾಡೆಮಿ ಆರಂಭಿಸಿದೆ. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇದಕ್ಕಾಗಿ ವಿಶೇಷ ಆ್ಯಪ್ ರೂಪಿಸಿ ಬಿಡುಗಡೆ ಮಾಡಿದೆ.

ಈ ಆ್ಯಪ್ ಅನ್ನು ನಿನ್ನೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಆಯಪ್​ ಲೋಕಾರ್ಪಣೆ ಮಾಡಿದ್ದಾರೆ.