ವಿಮಾನದಲ್ಲಿ ಮಾಜಿ ಕೇಂದ್ರ ಸಚಿವ ಮಾರನ್ ಅವರನ್ನು ಆಶ್ಚರ್ಯಚಕಿತಗೊಳಿಸಿದ ‘ಪೈಲಟ್’ ರೂಡಿ

kannada t-shirts

ನವದೆಹಲಿ, ಜುಲೈ 15, 2021 (www.justkannada.in): ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರು ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದಲ್ಲಿ ಆಸೀನರಾಗಿದ್ದಾಗ, ಆ ವಿಮಾನದ ಕ್ಯಾಪ್ಟನ್ ಇವರ ಬಳಿ ಬಂದು ಮಾತಿಗೆಳೆದರು.jk

“ಓ ನೀವೂ ಸಹ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವಿರಾ?!” ಎಂದು ಇಂಡಿಗೊ ವಿಮಾನದ ಕ್ಯಾಪ್ಟನ್ ಚೆನ್ನೈನ (ಕೇಂದ್ರ) ಡಿಎಂಕೆ ಎಂಪಿ ಅವರನ್ನು ಪ್ರಶ್ನಿಸಿದರು. ಇದ್ದಕ್ಕಿದ್ದಂತೆ ವಿಮಾನದ ಪೈಲಟ್ ತಮ್ಮ ಬಳಿ ಬಂದು ಹೀಗೇಕೆ ಕೇಳುತ್ತಿದ್ದಾರೆ ಎಂದು ಮಾರನ್ ಅವರಿಗೆ ತಿಳಿಯಲಿಲ್ಲ. ಆದರೆ ತಮ್ಮನ್ನು ಮಾತನಾಡಿಸಲು ಬಂದ ವಿಮಾನದ ಕ್ಯಾಪ್ಟನ್ ತನ್ನ ಸಹೋದ್ಯೋಗಿ ಸಂಸದ ರಾಜೀವ್ ಪ್ರತಾಪ್ ರೂಡಿ ಎಂದು ಗೊತ್ತಾದಾಗ ಮೂಕವಿಸ್ಮಿತರಾದರು!

ರೂಡಿ, ಬಿಹಾರ್‌ ನ ಸರನ್ ಛಪ್ರದ ಲೋಕಸಭಾ ಸದಸ್ಯರಾಗಿದ್ದು ತಮ್ಮ ವಾಣಿಜ್ಯ ವಿಮಾನ ಚಾಲನೆ ಮಾಡುವ ಪರವಾನಗಿಯನ್ನು ಉಳಿಸಿಕೊಳ್ಳಲು ನಿರ್ಧಿಷ್ಟ ಗಂಟೆಗಳಷ್ಟು ವಿಮಾನ ಚಾಲನೆ ಮಾಡಲೇಬೇಕಂತೆ! ಹಾಗಾಗಿ ಬಿಜೆಪಿ ನಾಯಕ ರೂಡಿ ಜೂನ್ 13ರ ಸಂಜೆ ದೆಹಲಿ-ಚೆನ್ನೈ ವಿಮಾನವನ್ನು ಚಾಲನೆ ಮಾಡಲು ಸಿದ್ಧರಾಗಿದ್ದರು, ಹಾಗೂ ಮಾರನ್ ಸಹ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವಿಷಯವನ್ನು ಮಾರನ್ ಅವರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ‘ರೂಡಿ ರಾಜಕಾರಣಿಯಿಂದ ಪೈಲಟ್’ ಎಂಬ ಶೀರ್ಷಿಕೆಯಡಿ ವಿಚಾರ ಹಂಚಿಕೊಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ರೂಡಿ ಅವರು ಮುಖಗವಸು ಧರಿಸಿದ್ದ ಕಾರಣ ಅವರನ್ನು ನಾನು ಕೂಡಲೇ ಗುರುತಿಸಲಾಗಲಿಲ್ಲ. ಆದರೆ ಅವರ ಧ್ವನಿ ಬಹಳ ಆಪ್ತವಾಗಿತ್ತು. ಅವರು ನನ್ನ ಬಳಿ ಬಂದು ಮಾತನಾಡಿಸಿದಾಗ ಅವರ ಕಣ್ಣಿನಲ್ಲಿ ಮಾಸ್ಕ್ ಹಿಂದಿರುವ ಕಿರುನಗೆ ನನಗೆ ತಿಳಿಯಿತು. ಹಾಗಾದರೆ ನಿಮಗೆ ನನ್ನ ಗುರುತು ಸಿಗಲಿಲ್ಲವೇ ಎಂದು ಉದ್ಘರಿಸಿದರು. ಆಗ ನನಗೆ ಆತ ನನ್ನ ಆತ್ಮೀಯ ಸ್ನೇಹಿತ, ಹಿರಿಯ ಸಂಸತ್ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಎಂದು ತಿಳಿಯಿತು,” ಎಂದು ಮಾರನ್ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಮಾರನ್ ಅವರು ವಿಮಾನ ಏರುವುದಕ್ಕೆ ಕೆಲವು ಗಂಟೆಗಳ ಮುಂಚೆ ಮಾರನ್ ಹಾಗೂ ರೂಡಿ ಇಬ್ಬರೂ ಸಂಸತ್‌ನ ಎಸ್ಟಿಮೇಟ್ಸ್ ಸಮಿತಿ ಸಭೆಯಲ್ಲಿ ಜೊತೆಯಾಗಿ ಭಾಗವಹಿಸಿದ್ದರು. “ರಾಜಕಾರಣಿಯಿಂದ ಪೈಲಟ್ ಆಗಿ ಪರಿವರ್ತಿತನಾಗಿದ್ದಂತಹ ರೂಡಿಯನ್ನ ಕಂಡು ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಯಿತು. ನಾನು ದೆಹಲಿಯಿಂದ ಚೆನ್ನೈಗೆ ತೆರಳುವ ವಿಮಾನಕ್ಕೆ ರೂಡಿ ಅವರು ಕ್ಯಾಪ್ಟನ್ ಆಗಿದ್ದಾರೆ ಎಂಬ ವಿಷಯವನ್ನು ನನಗೆ ನಂಬಲೇ ಆಗಲಿಲ್ಲ. ನಂತರ ನಾನು ನಕ್ಕು ನಾನು ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತೇನೆ,” ಎಂದು ಉತ್ತರಿಸಿದೆ.

ಮಾರನ್ ಅವರ ತಂದೆ ಮುರಸೋಳಿ ಮಾರನ್ ಅವರು ಕೇಂದ್ರದಲ್ಲಿ ವಾಣಿಜ್ಯ ಸಚಿವರಾಗಿದ್ದಾಗ ರೂಡಿ ಅವರು ರಾಜ್ಯ ಸಚಿವರಾಗಿದ್ದ ವಿಚಾರವನ್ನೂ ಸಹ ಡಿಎಂಕೆ ನಾಯಕ ದಯಾನಿಧಿ ಮಾರನ್ ನೆನಪಿಸಿಕೊಂಡಿದ್ದಾರೆ.

“ಇದೊಂದು ಅವಿಸ್ಮರಣೀಯ ವಿಮಾನ ಪ್ರಯಾಣವಾಗಿತ್ತು! ಓರ್ವ ಸಂಸತ್ ಸದಸ್ಯ ವಾಣಿಜ್ಯ ವಿಮಾನದ ಕ್ಯಾಪ್ಟನ್ ಆಗುವ ಎಷ್ಟು ಪ್ರಸಂಗಗಳು ನಡೆಯುತ್ತವೆ? ಬಹಳ ಅಪರೂಪ?! ಈ ವಿಚಾರವನ್ನು ಸಾಕಷ್ಟು ಸಮಯದವರೆಗೆ ನಾನು ಖಂಡಿತವಾಗಿಯೂ ಪ್ರಸ್ತಾಪಿಸುವುದನ್ನು ಮುಂದುವರೆಸುತ್ತೇನೆ ಎನಿಸುತ್ತಿದೆ. ಈ ವಿಮಾನದಲ್ಲಿ ಇದ್ದವರೆನ್ನೆಲ್ಲಾ ದೆಹಲಿಯಿಂದ ಚೆನ್ನೈಗೆ ಸುರಕ್ಷಿತವಾಗಿ ತಲುಪಿಸಿದ್ದಕ್ಕಾಗಿ ಕ್ಯಾಪ್ಟನ್ ರಾಜೀವ್ ಪ್ರತಾಪ್ ರೂಡಿ ಅವರಿಗೆ ಧನ್ಯವಾದಗಳು!” ಎಂದು ಮಾರನ್ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Rajiv Pratap Rudy- pilot-surprised – former Union Minister- Maran – flight

website developers in mysore