ಎರಡು ದಶಕಗಳ ಬಳಿಕ ಸೂಪರ್ ಸ್ಟಾರ್ ರಜನಿ ‘ಸೂಪರ್ ಕಾಪ್’!

ಚೆನ್ನೈ, ಜುಲೈ 26, 20118 (www.justkannada.in): ಸೂಪರ್ ಸ್ಟಾರ್ ರಜನಿ ‘ದರ್ಬಾರ್’ ಆರಂಭವಾಗಿದೆ. ಸೂಪರ್ ಸ್ಟಾರ್ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ.

ಹೌದು. ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರ ಕುರಿತ ಕುತೂಹಲಕ್ಕೆ ನಿರ್ದೇಶಕರು ಇದೀಗ ತೆರೆ ಎಳೆದಿದ್ದಾರೆ. ‘ದರ್ಬಾರ್’ ಚಿತ್ರದಲ್ಲಿನ ರಜನಿಕಾಂತ್ ಪಾತ್ರದ ಫೋಟೋ ಝಲಕ್​ಗಳನ್ನು ಮುರುಗದಾಸ್ ಬಹಿರಂಗ ಪಡಿಸಿದ್ದಾರೆ.

ಇಲ್ಲಿ ಒಂದರಲ್ಲಿ ರಜನಿ ಖಡಕ್ ಖಾಕಿಯಲ್ಲಿ ಮಿಂಚಿದರೆ, ಮತ್ತೊಂದರಲ್ಲಿ ರಾಯಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ದಶಕದ ಬಳಿಕ ರಜನಿಕಾಂತ್ ಪೊಲೀಸ್ ಪಾತ್ರದೊಂದಿಗೆ ಮರಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ.