ಮೊದಲು ದೇಶದಲ್ಲಿ ಅಸಹಿಷ್ಣತೆ ಇರಲಿಲ್ಲ; ವಿಶ್ವಗುರು ಬಂದ ಬಳಿಕ ಇಂತಹ ಬೆಳವಣಿಗೆ ನಡೆಯುತ್ತಿದೆ- ಬಿ.ಕೆ ಹರಿಪ್ರಸಾದ್.

kannada t-shirts

ನವದೆಹಲಿ,ಜೂನ್,29,2022(www.justkannada.in): ರಾಜಸ್ತಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣವನ್ನ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ರಾಜಸ್ಥಾನದಲ್ಲಿ ನಡೆದಿರುವುದು ಘೋರವಾದ ಘಟನೆ, ಇದು ಖಂಡನೀಯ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಹೇಳಿಕೆ ನೀಡುವುದು ತಪ್ಪು. ಎಲ್ಲ ಧರ್ಮ ಭಾಷೆಗಳು ಅನ್ಯೂನವಾಗಿರುವ ದೇಶ. ಘಟನೆಗೆ ಹಲವಾರು ಕಾರಣ ಇರಬಹುದು. ಸಾವನ್ನು ವೈಭವಿಕರಿಸಬಾರದು.

ಹಿಂದೆ ಶಂಕರಲಾಲ್ ಎನ್ನುವವರು ಓರ್ವ ಹುಡುಗನ ಹತ್ಯೆ ಮಾಡಿಸಿದ್ದರು. ಫರಿದಾಬಾದ್​ ನಲ್ಲಿ ಅಲ್ಪಸಂಖ್ಯಾತ ಅನ್ನೊ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕಟುವಾದಲ್ಲಿ ಐದು ವರ್ಷದ ಹೆಣ್ಣು ಮಗು ಕೊಲೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಖಂಡಿಸಬೇಕು. ಈ ಹಿಂದೆ ಅಸಹಿಷ್ಣುತೆ ಎನ್ನುವುದು ದೇಶದಲ್ಲಿ ಇರಲಿಲ್ಲ. ವಿಶ್ವಗುರು ಬಂದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿದೆ. ಇದನ್ನು ಸಭ್ಯ ನಾಗರಿಕ ಸಮಾಜ ವಿರೋಧಿಸಬೇಕು ಎಂದು  ಬಿಕೆ ಹರಿಪ್ರಸಾದ್ ಹೇಳಿದರು.

Key words: rajastan-murder-case-congress-leader-BK Hariprasad

website developers in mysore