ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ ಲಾಂಚ್ ಕಾರ್ಯಕ್ರಮಕ್ಕೆ ರಾಜಮೌಳಿ

Promotion

ಬೆಂಗಳೂರು, ಮಾರ್ಚ್ 02, 2021 (www.justkannada.in): ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಮಾರ್ಚ್ 4 ರಂದು ಲಾಂಚ್ ಆಗಲಿದೆ.

ಕಿರೀಟಿ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಲಾಂಚ್ ಆಗಲಿದ್ದು, ಇದಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಸಾಥ್ ನೀಡಲಿದ್ದಾರೆ.

ಮಾರ್ಚ್ 4 ರಂದು ಟೈಟಲ್ ಲಾಂಚ್ ಆಗಲಿದ್ದು, ರಾಜಮೌಳಿ ಅತಿಥಿಯಾಗಿ ಆಗಮಿಸಲಿದ್ದಾರೆ. ಇದು ಲವ್ ಕಮ್ ಫ್ಯಾಮಿಲಿ ಎಂಟರ್’ಟೈನರ್ ಸಿನಿಮಾ ಎನ್ನಲಾಗುತ್ತಿದೆ.

ಅಂದಹಾಗೆ ಈ ಸಿನಿಮಾಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಲಿದ್ದಾರೆ.