ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ: ಕರಾಳ ಸ್ವಾತಂತ್ರ ದಿನಾಚರಣೆಗೆ ನಿರ್ಧಾರ

kannada t-shirts

ಮೈಸೂರು, ಜುಲೈ 19, 2020 (www.justkannada.in): ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ.

ಇದರ ಅಂಗವಾಗಿ *ಕರಾಳ ಸ್ವಾತಂತ್ರ ದಿನಾಚರಣೆ* ಆಚರಣೆಗೆ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಸುದ್ಧಿ ಗೋಷ್ಠಿಯಲ್ಲಿ ರೈತ ಮುಖಂಡ ವಿದ್ಯಾಸಾಗರ್ ಮಾಹಿತಿ‌ ನೀಡಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜುಲೈ 21 ರಂದು ರೈತ ಹುತಾತ್ಮ ದಿನಾಚರಣೆ ಇದೆ.ಅಂದು ಒಂದು ದಿನದ ದೊಡ್ಡ ಚಳುವಳಿ ಮಾಡಲಾಗುವುದು. ಆಗಸ್ಟ್ 15 ರಂದು ಕರಾಳ ಸ್ವತಂತ್ರ ದಿನಾಚರಣೆ ಆಚರಣೆ ಮಾಡುವ ಮೂಲಕ ಚಳುವಳಿ ಮಾಡಲಾಗುವುದು ಎಂದು ಹೇಳಿದರು.

ಇದು ರೈತರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕಾಯ್ದೆ ಇದಾಗಿದೆ.ಆಗಸ್ಟ್ 15 ರಿಂದ ರಾಜ್ಯವ್ಯಾಪ್ತಿ ನಿರಂತರ ಹೋರಾಟ ಮಾಡಲಾಗುವುದು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು
ಸುಗ್ರೀವಾಜ್ಞೆ ಮೂಲಕ ಹೊರಡಿಸಿದೆೆ. ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ.
ಯಡಿಯೂರಪ್ಪ ರೈತ ಪರ ಮುಖ್ಯಮಂತ್ರಿ ಅಂತ ತಿಳಿದಿಕೊಂಡಿದ್ವಿ ಆದ್ರೆ ಈಗ ರೈತರ ಭೂಮಿತಾಯಿ ಕಿತ್ತಿಕೊಳ್ಳುವ ಮುಖ್ಯಮಂತ್ರಿ ಆಗಿದ್ದಾರೆ. ಈ ಕಾಯ್ದೆಯನ್ನ ಸರ್ಕಾರ ಹಿಂಪಡೆಯದೆ ಹೊದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನ ಸರ್ಕಾರ ಎದುರಿಸಬೇಕಾಗುತ್ತದೆ. ಸರ್ಕಾರ ಈ ಎಚ್ಚೆತ್ತುಕೊಳ್ಳಬೇಕು. ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ರೈತ ಮುಖಂಡ ವಿದ್ಯಾಸಾಗರ್ ಹಾಗೂ ರಘು ಹಿಮ್ಮಾವು ದೂರಿದರು.

website developers in mysore