ಉತ್ತಮ ಮಳೆ ಹಿನ್ನೆಲೆ: ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ- ಸಚಿವ ಗೋಪಾಲಯ್ಯ ಸೂಚನೆ….

kannada t-shirts

ಹಾಸನ,ಆ,7,2020(www.justkannada.in): ರಾಜ್ಯದಲ್ಲಿ ನದಿಪಾತ್ರದಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಯ ರೈತರು ನೀರು ಬಿಡಿ ಎನ್ನುತ್ತಿದ್ದಾರೆ. ಹಾಸನದಲ್ಲೂ ಉತ್ತಮ ಮಳೆಯಾಗುತ್ತಿದ್ದು  ಈ ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚನೆ ನೀಡಿದರು.jk-logo-justkannada-logo

ಹಾಸನದಲ್ಲಿ ಅಧಿಕಾರಿಗಳ ಜೊತೆ ಮಳೆ‌ ಸಂಬಂಧ ಹಾನಿ ಕುರಿತಂತೆ ಸಭೆ ನಡೆಸಿದ ನಂತರ  ಮಾತನಾಡಿದ ಉಸ್ತುವಾರಿ ಸಚಿವ ಗೋಪಾಲಯ್ಯ, ನದಿಪಾತ್ರದಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಯ ರೈತರು ನೀರು ಬಿಡಿ ಎನ್ನುತ್ತಿದ್ದಾರೆ. ಹೀಗಾಗಿ ನೀರು ಬಿಡಲು ಆದೇಶ ನೀಡುತ್ತಿರುವುದಾಗಿ ತಿಳಿಸಿದರು.

ಗುಡ್ಡಕುಸಿಯುವುದು, ನೀರು ಹೆಚ್ಚು ಬರುವ ಸ್ಥಳಗಳಿದ್ದರೆ ಕೂಡಲೇ ಜನರನ್ನು ಸ್ಥಳಾಂತರಿಸಲು ಸೂಚಿಸಿದ್ದೇನೆ. ಬೆಳೆ ನಷ್ಟ, ಜೀವಹಾನಿ, ಮನೆ ಬಿದ್ದು ಹೋಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಹಣ ನೀಡಿ, ವರದಿ ಬಂದ ನಂತರ ಮತ್ತಷ್ಟು ಪರಿಹಾರ ನೀಡಲಾಗುವುದು ಎಂದು ಸಚಿವ ಗೋಪಾಲಯ್ಯ ತಿಳಿಸಿದರು.rain-immediately-water-hemavathi-dam-hassan-minister-gopalaiah

ಇಂದು ನಾಳೆ ಇದ್ದು ಕೆಲವು ಸ್ಥಳಗಳಿಗೆ ನಾನೇ ಖುದ್ದು ಭೇಟಿ ನೀಡುತ್ತೇನೆ. ಸಮಸ್ಯೆ  ಸರಿಪಡಿಸಲು ಸೂಚಿಸಿದ್ದೇನೆ.  ಜಿಲ್ಲೆಯ ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿದೆ. ಜಿಲ್ಲೆಯಲ್ಲಿ ಇದುವರೆಗೂ 190 ಕ್ಕೂ ಹೆಚ್ವು ಮನೆ ಬಿದ್ದಿದೆ. ಓರ್ವ ಮಳೆಯಿಂದ ಸಾವನ್ನಪ್ಪಿದ್ದಾರೆ. 2100 ಹೆಕ್ಟೇರ್‌ ಗೂ ಹೆಚ್ಚು ಪ್ರದೇಶದಲ್ಲಿ ಜೋಳದ ಬೆಳೆ ನಷ್ಟವಾಗಿದೆ. 779 ಹೆಕ್ಟೇರ್ ಪ್ರದೇಶದಲ್ಲಿ ಭತ್ತನಾಶವಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

Key words: rain –Immediately- water – Hemavathi Dam – Hassan-Minister Gopalaiah

website developers in mysore