ರಾಯಚೂರು: ಭತ್ತದ ಬೆಳೆ ಹಾನಿ ಸರ್ವೆ, ಹಾಪ್ ಕಾಮ್ಸ್ ಅಂಗಡಿ ತೆರೆಯಲು ಸಚಿವ ಬಿ.ಸಿ.ಪಾಟೀಲ್ ಸೂಚನೆ

ರಾಯಚೂರು, 08, 2020 (www.justkannada.in):  ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಆಲಿಕಲ್ಲು ಮಳೆಯಿಂದ‌ ಹಾನಿಯಾದ ಭತ್ತದ ಬೆಳೆಗೆ ಸರ್ವೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ  ಸೂಚನೆ ನೀಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಕೃಷಿ ತೋಟಗಾರಿಕೆ, ಪೊಲೀಸ್ ಸೇರಿದಂತೆ‌ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ, ರಾಯಚೂರಿನಲ್ಲಿ ಹಾಪ್ ಕಾಮ್ಸ್ ಅಂಗಡಿಗಳನ್ನು ಆರಂಭಿಸಲು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟ ‌ನಿರ್ದೇಶನ ನೀಡಿದೆ.ರಸಗೊಬ್ಬರ, ಕೃಷಿ ಉತ್ಪನ್ನಗಳ ಸಾಗಣಿಕೆಗೆ ಪೊಲೀಸ್ ಇಲಾಖೆ ತೊಂದರೆ ಕೊಡಬಾರದು. ಕೃಷಿ ಉಪಕರಣಗಳ ಅಂಗಡಿಗಳು ತೆರೆಯಲು‌ ಈಗಾಗಲೇ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ರಾಯಚೂರಿನಲ್ಲಿ ಹಾಪ್ ಕಾಮ್ಸ್ ಅಂಗಡಿಗಳನ್ನು ಆರಂಭಿಸಲು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಸಗೊಬ್ಬರ ಅಭಾವ ಆಗದಂತೆ‌ ಕ್ರಮವಹಿಸಲಾಗಿದೆ.ನಕಲಿ ,ಕಳಪೆ ಬೀಜ ಮಾರಾಟದ ಬಗ್ಗೆ ವಿಜಿಲೈನ್ಸ್ ಮೂಲಕ ಪರಿಶೀಲನೆ ಮಾಡಲಾಗುತ್ತದೆ.ಕಳಪೆ ಬೀಜ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

ರಾಯಚೂರು ಜಿಲ್ಲೆಯನ್ನು ಬರಗಾಲಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಗಳ ಜೊತೆಗೆ ಚರ್ಚಿಸುವುದಾಗಿ ಸ್ಪಷ್ಟಪಡಿಸಿದ ಸಚಿವರು,ಭತ್ತ ಕಟಾವು ಯಂತ್ರ ತರುವಾಗ ಪೊಲೀಸರು ಲಂಚ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿಗೆ ಸೂಚನೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಗೂ ಮುನ್ಮ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಮುಂಗಾರು‌ಬಿತ್ತನೆಗೆ ರೈತರಿಗೆ ಅಗತ್ಯವಾದ ಬೀಜ ರಸಗೊಬ್ಬರದ ದಾಸ್ತಾನು ಸಂಬಂಧ ಹಾಗೂಮುಂಗಾರು ಬಿತ್ತನೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ‌ ಮಾಹಿತಿ ಪಡೆದರು. ಎಪಿಎಂಸಿಯಲ್ಲಿ ಬಿಳಿ ಜೋಳ ಖರೀದಿಗೆ ಅವಕಾಶ ಮಾಡಿಕೊಡುವಂತೆ ಹಾಗೂ ಆಂದ್ರ, ತೆಲಂಗಾಣದಿಂದ ಈ ಭಾಗಕ್ಕೆ ಹತ್ತಿ ಬೀಜ ಬರುತ್ತಿದ್ದು, ಸರ್ಕಾರದಿಂದ ಹತ್ತಿ ಬೀಜ ಖರೀದಿಸಿ ರೈತರಿಗೆ ಪೂರೈಸಬೇಕೆಂಬ ಶಾಸಕರಾದ ವೆಂಕಟರಾವ್ ನಾಡಗೌಡ ಹಾಗೂ ಬಸನಗೌಡ ದದ್ದಲ್ ,‌ಎನ್.ಎಸ್.ಬೋಜರಾಜ ಇವರುಗಳ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಬಿ.ಸಿ.ಪಾಟೀಲ್,ಕೃಷಿ ಚಟುವಟಿಕೆಗಳ ಬಗ್ಗೆ ಮುಖ್ಯಮಂತ್ರಿ ಗಳ ಗಮನಕ್ಕೆ ತರುತ್ತಿದ್ದು ರೈತರ ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 800 ಸುಸಜ್ಜಿತ ಭತ್ತ ಕಟಾವು ಯಂತ್ರಗಳಿದ್ದು ಒಂದು ವೇಳೆ ಭತ್ತ ಕಟಾವು ಮಾಡುವಲ್ಲಿ ರೈತರಿಂದ ಹೆಚ್ಚಿನ ದರ ಪಡೆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ರೈತರಿಗೆ ಮಾಹಿತಿ ನೀಡಲಾಯಿತು.
2018 – 19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭೀಮ ಯೋಜನೆಯಡಿಯಲ್ಲಿ ಸುಮಾರು 51838 ರಂತೆ ರೈತರಿಗೆ ಒಟ್ಟು 132 . 10 ಕೋಟಿ ರೂಪಾಯಿಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ 24407 ರೈತರಿಗೆ ಒಟ್ಟು 60 . 31 ಕೋಟಿ ರೂಪಾಯಿಗಳು ವಿಮಾ ಪರಿಹಾರ ನೀಡಲಾಗಿದೆ.2019 – 20ನೇ ಸಾಲಿನಲ್ಲಿ ಮುಂಗಾರು ಹಂಗಾಮುನಲ್ಲಿ ಒಟ್ಟು 110925 ರೈತರು ವಿಮಾ ನೋಂದಣಿ, ಹಿಂಗಾರು ಹಂಗಾಮಿನಲ್ಲಿ ಒಟ್ಟು 43822 ರೈತರು ವಿಮಾ ನೋಂದಣಿ ಜಾಗೂಬಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ 202052 ಅರ್ಹ ರೈತ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 112 . 36 | ಹಾಗೂ ರಾಜ್ಯ ಸರ್ಕಾರದಿಂದ 36 . 11 ಒಟ್ಟು 148 . 47 ಕೋಟಿ ರೂಪಾಯಿಗಳು ನೇರವಾಗಿ ರೈತರ ಆಧಾರ್ ಜೋಡಣೆಯ ಖಾತೆಗೆ ಜಮೆಯಾಗಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.