ದಲಿತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ- ಸಿ.ಟಿ.ರವಿ ಆಕ್ರೋಶ

ಮೈಸೂರು,ಅಕ್ಟೋಬರ್,15,2020(www.justkannada.in) : ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಎಸ್‌ಡಿಪಿಐ ಮತಾಂಧತೆ ಕಾಂಗ್ರೆಸ್ ರಾಜಕೀಯದಿಂದ ನಡೆದಿದೆ. ಒಂದು ವೇಳೆ ಈ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದರೆ ಕಾಂಗ್ರೆಸ್‌ನವರು ಬಿಡುತ್ತಿದ್ದರಾ? ರಾಹುಲ್ ಗಾಂಧಿ ಇಲ್ಲಿಗೆ ಬಂದು ಬಟ್ಟೆ ಹರಿದುಕೊಳ್ಳುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಕ್ರೋಶವ್ಯಕ್ತಪಡಿಸಿದರು.jk-logo-justkannada-logo

ಮೈಸೂರಿನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಕೆ ಜೆ ಹಳ್ಳಿ ಘಟನೆಯ ಹಿಂದಿನ ಕಾಂಗ್ರೆಸ್, ಎಸ್ ಡಿ ಪಿ ಐ ಮುಖಂಡರ ಸಂಚು ಉದ್ದೇಶ ಬಯಲಾಗಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಎಸ್ ಡಿ ಪಿಯ ಮುಖಂಡರ ವಾಟ್ಸ ಅಪ್ ಚಾಟ್ ಪೂರಕ ದಾಖಲೆಯಾಗಿದೆ. ಅವರನ್ನು ಸಿಲುಕಿಸಿ ನಮಗೆ ಏನು ಆಗಬೇಕಿದೆ ? ಮನೆ ವಾಹನ ಭಸ್ಮ ಮಾಡಿರೋದು ಸತ್ಯ. ಇದನ್ನು ಯಾರು ಮಾಡಿದ್ದು ? ಎಂದು ಪ್ರಶ್ನಿಸಿದರು.

ಪೋಸ್ಟ್‌ಗೆ ಕೌಂಟರ್ ಪೋಸ್ಟ್ ಮಾಡಲಾಗಿತ್ತು. ನಾನು ಪೋಸ್ಟ್ ಮತ್ತು ಕೌಂಟರ್ ಪೋಸ್ಟ್ ಎರಡನ್ನು ಒಪ್ಪುವುದಿಲ್ಲ. ಈ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಿದ್ದರೆ ಕಾಂಗ್ರೆಸ್‌ನವರು ಬಿಡುತ್ತಿರಲಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಬಂದು ಬಟ್ಟೆ ಹರಿದುಕೊಳ್ಳುತ್ತಿದ್ದರು. ರಾಷ್ಟ್ರೀಯ ಅಲ್ಲ ಅಂತರಾಷ್ಟ್ರೀಯ ವಿವಾದ ಮಾಡುತ್ತಿದ್ದರು ಎಂದು ಟೀಕಿಸಿದರು.

Rahul Gandhi-coming-tearing*down-clothes-CT Ravi's-outrage-against-Congress

ಡಿಜೆ ಹಳ್ಳಿ ಗಲಾಟೆಯನ್ನ ಕಾಂಗ್ರೆಸ್ ಉಪಚುನಾವಣೆಯಲ್ಲಿ ಚರ್ಚೆ ಮಾಡಲಿ. ಚರ್ಚೆಯಿಂದ  ಅವರು ತೋಡಿದ ಖೆಡ್ಡಾಕ್ಕೆ ಅವರೇ ಬಿಳುತ್ತಾರೆ. ಆ ಚರ್ಚೆ ಅವರಿಗೆ ಮುಳುವಾಗಲಿದೆ. ಶಿರಾ, ಆರ್ ಆರ್ ನಗರ ಉಪಚುನಾವಣೆಯಲ್ಲಿ ನಾವು ಗೆದ್ದೆ ಗೆಲ್ತೇವೆ. ಅಖಂಡ‌ ಶ್ರೀನಿವಾಸರನ್ನ ನಾವು ದೇಶದ ಪ್ರಜೆ ಅಂತ ನೋಡ್ತೇವೆ. ಆದರೆ, ಕಾಂಗ್ರೆಸ್ ದಲಿತರು, ಅಲ್ಪಸಂಖ್ಯಾತರು ಅಂತ ಬಂದಾಗ ದಲಿತರನ್ನ ಕೈ ಬಿಡುತ್ತೆ ಎಂದು ಕಿಡಿಕಾರಿದರು.

ದಲಿತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ಮುಂದು

ದಲಿತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ರಾಜಕೀಯ ಅಸ್ತ್ರವಾಗಿ ಮಾತ್ರ ದಲಿತರನ್ನ ಬಳಕೆ ಮಾಡ್ತಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಯಾವ ಕೆಲಸವು ಇವರು ಮಾಡಿಲ್ಲ. ಇದು ಅಖಂಡ ಶ್ರೀನಿವಾಸ ಪ್ರಕರಣದಲ್ಲೇ ಗೊತ್ತಾಗುತ್ತೆ ಎಂದು ಹೇಳಿದರು.

ಎಸ್ ಡಿ ಪಿ ಐ ಬ್ಯಾನ್ ಕಾನೂನು ಪ್ರಕ್ರಿಯೆ ಆಗಬೇಕು

ಎಸ್ ಡಿ ಪಿ ಐ ಬ್ಯಾನ್ ಬಗ್ಗೆ ಮನಸ್ಥಿತಿ ಇದ್ದರು ಅದು ಕಾನೂನು ಪ್ರಕ್ರಿಯೆ ಆಗಬೇಕು. ಪೊಲೀಸರು ಈ ಬಗ್ಗೆ ಸೂಕ್ತ ದಾಖಲೆ ಸಂಗ್ರಹ ಮಾಡುತ್ತಿದ್ದಾರೆ. ಸುಮ್ಮನೇ ಬ್ಯಾನ್ ಮಾಡಿದರೆ ಕಾನೂನು ತೊಡಕಾಗುತ್ತದೆ. ಗೃಹ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.

key words : Rahul Gandhi-coming-tearing*down-clothes-CT Ravi’s-outrage-against-Congress