ಅ.2ರಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ‘ರಾಗಿಕಣ ಸಂತೆ’.

kannada t-shirts

ಬೆಂಗಳೂರು,ಸೆಪ್ಟಂಬರ್,30,2021(www.justkannada.in): ರಾಗಿಕಣ ತಂಡದ ವತಿಯಿಂದ ಅಕ್ಟೋಬರ್ 2 ಮತ್ತು 3 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ರಾಗಿಕಣ ಸಂತೆಯನ್ನ ಏರ್ಪಡಿಸಲಾಗಿದೆ.

ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ರಾಗಿಕಣ ಸಂತೆ ಪುನರಾರಂಭಗೊಂಡು ಅಕ್ಟೋಬರ್ 3 ರಂದು ಕೂಡ ಮುಂದುವರೆಯಲಿದೆ, ಉತ್ಪನ್ನ ಕ್ಷೇತ್ರಕ್ಕೆ ಎಂದೂ ಒತ್ತು ಕೊಡುವ ಸಂತೆ, ಕೂವಿಡ್ ಮಹಾಮಾರಿಯಿಂದ ತತ್ತರಿಸುತ್ತಿರುವ ಶ್ರಮಿಕ ಸಮುದಾಯದೊಂದಿಗೆ ಕೈಗೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿದೆ. ಬರುವ ಎರಡು ದಿನಗಳ ಸಂತೆಯಲ್ಲಿ, ಇತರ ಕೈಉತ್ಪನ್ನಗಳ ಜೊತೆಗೆ ಕೈಮಗ್ಗ ಮತ್ತು ಖಾದಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಗಿದೆ.

ಅಕ್ಟೋಬರ್ 2 ರಂದು 11 ಘಂಟೆಗೆ ಸಂತೆಯ ಉದ್ಘಾಟನೆಯನ್ನು ನಿವೃತ್ತ ಐಪಿಸ್ ಅಧಿಕಾರಿ ಹಾಗೂ ಗಾಂಧೀವಾದಿ ಅಜಯ್ ಕುಮಾರ್ ಸಿಂಗ್ ರವರು ನಡೆಸಲಿದ್ದಾರೆ. ಅಕ್ಟೋಬರ್ 2 ರಂದು ಮೊದಲಿಗೆ ನಿಶಾಂತ್ ಗುರವ್ ಅವರು ಗಾಂಧಿ ಸ್ಮರಣ ಗೀತೆಗಳನ್ನು ಹಾಡಲಿದ್ದಾರೆ. ನಿಶಾಂತ್ ಎನ್ನೊಬಾಟನಿ ಕ್ಷೇತ್ರದಲ್ಲಿ ಸಂಶೋಧಕರಾಗಿದ್ದಾರೆ. ನಂತರ ಹೆಸರಾಂತ ನೃತ್ಯಕಲಾವಿದ ಸುಹಾಸಿನಿ ಕೌಲಗಿಯವರಿಂದ ಭರತನಾಟ್ಯ ಪ್ರದರ್ಶನವಿದೆ. ಈ ಕಾರ್ಯಕ್ರಮದಲ್ಲಿ ತತ್ತರಿಸುತ್ತಿರುವ ರೈತರ ಬವಣೆ, ಅತೀವೇಗದಲ್ಲಿ ನಾಶವಾಗುತ್ತಿರುವ ಪರಿಸರದ ಪರಿಸ್ಥಿತಿಯ ಬಗ್ಗೆ ಆಳವಾದ ಯೋಚನೆಗಳಿವೆ.

ಅಕ್ಟೋಬರ್ 3 ರಂದು 11 ಘಂಟೆಗೆ ಚರ್ಚಾಘೋಷ್ಠಿಯೊಂದನ್ನು ಏರ್ಪಡಿಸಲಾಗಿದೆ. ಇದರ ವಿಷಯ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’. ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ಮೆಟಫರ್ ರಾಚ ದ ರವಿಕಿರಣ್, KASKOM ಸಂಸ್ಥೆಯ ಸ್ವಾಮಿನಾಥನ್ ವೃತಲಿಂಗಂರವರು ಈ ಗೋಷ್ಟಿಯಲ್ಲಿ ಭಾಗವಹಿಸುವವರು, ಈ ಚರ್ಚೆಯನ್ನು NIFT ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ವಿನ್ಯಾಸಕಿ ಇಳಾ ದುಬೆ ಸಮನ್ವಯಿಸುತ್ತಾರೆ.

ಎರಡೂ ದಿನಗಳ ರಾಗಿಕಣ ಸಂತೆಯಲ್ಲಿ ವೈವಿಧ್ಯ ಕೈಉತ್ಪನ್ನ ಪದಾರ್ಥಗಳು ಮಾರಾಟಕ್ಕಿರಲಿವೆ. ಪ್ರಖ್ಯಾತ ಖಾದಿ ಮತ್ತು ಕ್ರೈಮಗ್ಗ ಸಂಸ್ಥೆಗಳಾದ ಜನಪದ ಖಾದಿ, ಮಗನ್ ಖಾದಿ, ಚರಕ ಸೊಸೈಟಿ, ದೇಸಿ ಟ್ರಸ್ಟ್, ಕೈಮಗ್ಗ ನೇಕಾರರ ಒಕ್ಕೂಟ, KASKOM ಸಂಸ್ಥೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ನೈಸರ್ಗಿಕವಾಗಿ ಬೆಳೆದ ಸೊಪ್ಪು ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆಗಳು, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳು ಅಲ್ಲದೆ ಇನ್ನೂ ಬಹಳಷ್ಟು ಪದಾರ್ಥಗಳು ಮಾರಾಟಕ್ಕಿರಲಿವೆ.

ರಾಗಿಕಣವು ಬೆಂಗಳೂರಿನ ನಗರವಾಸಿಗಳನ್ನು ಸಂತೆಯ ಅಪೂರ್ವ ಅನುಭವ ಪಡೆಯಲು  ಆಹ್ವಾನಿಸುತ್ತದೆ. ಗ್ರಾಮಗಳಲ್ಲಿ ಅಸಂಖ್ಯಾತ  ಬಡ ಕಾಯಕ ಜೀವಿಗಳಿಗೆ ಕೊವಿಡ್  ತಂದ ದಾರುಣ ಉದ್ಯೋಗ ನಾಶ ಮತ್ತು ಅಲ್ಲೋಲ ಕಲ್ಲೋಲ ಸ್ಥಿತಿಯ ಬಗ್ಗೆ ವಿಶದವಾಗಿ ಅರಿಯಲು, ಅವರೊಂದಿಗೆ ಕೈ ಜೋಡಿಸಲು ಸಂತೆಗೆ ಬನ್ನಿ ಎಂದು ರಾಗಿಕಣ ತಂಡ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  ರಾಗಿಕಣ ತಂಡ ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆಯ ಹತ್ತಿರ, ಬೆಂಗಳೂರು ragikana.culturalhub@gmail.com

ENGLIH SUMMARY…

Ragi Kana Reopening on Oct 2 Weaving a better tomorrow!

Ragi Kana Santhe, the cultural hub and Sunday Market for the Handmade, reopens on October 2, to coincide with Mahatma Gandhi Jayanti and will continue on October 3 too. With weekly themes derived from a focus on helping handmade sectors impacted by the Covid pandemic. The theme for the beginning two day Santhe is handloom and khadi.

The Santhe will be inaugurated on October 2 at 11 am by Dr Ajai Kumar Singh, retired IPS officer. His personal life is starkly different from the Khaki profession he pursued. He is a staunch Gandhian and lover of poetry. Dr Singh, a believer in Gandhian way of life and philosophy, is vocal about the rights of hand making artisans. He currently also serves as Desi Trust Trustee.

The day will see Nishanth Gurav, a research fellow in the field of Ethnobotany performing songs in memory of Mahatma Gandhi. This will be followed by a Bharatanatyam performance by the talented young danseuse, Suhasini Koulagi. Her performance will reflect issues related to degrading environment & ecology, the plight of farmers, among others.

On October 3 at 11 am, a panel discussion on “Current Challenges of Khadi & Handloom” is scheduled. The panelists are Pavithra Muddaiah of Vimor, Ravi Kiran of Metaphor Racha, Swaminathan Vaithilingam of KASKOM. The discussion will be moderated by Ila Dubey, Designer, Visiting Faculty and Jury Panelist, NIFT Bengaluru.

Exhibition cum Sale

There will be a wide variety of handmade products available for sale over the two days. Participating partners for Handloom and Khadi include Janapada Khadi, Magan Khadi, KASKOM, Charaka Society, Desi Trust, Handloom Weavers’ Federation. Naturally grown vegetables and groceries, food products, cold pressed oils, handcrafted products from artisans and much more will be on offer. More details on the participating partners are in the annexure.

For Pictures of the Handloom and Khadi products and production, Ragi Kana Santhe click https://drive.google.com/drive/folders/1vGTSp7afHTJRje1Onm-GsAN8ajboWeAF?us p=sharing

Key words: Ragi Kana santhe- re-open- Bangalore – two days

website developers in mysore