ಮಾರ್ಚ್ ನಿಂದ ರೇಡಿಯೋ “ಮಾನಸ” ಆನ್ AIR

kannada t-shirts

ಮೈಸೂರು,ಫೆಬ್ರವರಿ,13,2021(www.justkananda.in) :  ಮೈಸೂರು ವಿವಿ ಮಾನಸಗಂಗೋತ್ರಿಯ ಆವರಣದಲ್ಲಿ ಮಾರ್ಚ್ ನಿಂದ ರೇಡಿಯೋ ಮಾನಸ ಕೇಂದ್ರ ಆರಂಭಗೊಳ್ಳಲಿದ್ದು, ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಗಂಗೋತ್ರಿಯ ಕಲರವ ಆಲಿಸಬಹುದಾಗಿದೆ.jk

ಶನಿವಾರ ವಿಜ್ಞಾನಭವನದಲ್ಲಿ ಮೈಸೂರು ವಿವಿಯ ರೇಡಿಯೋ ಸ್ಟೇಷನ್ ರೇಡಿಯೋ ಮಾನಸದ ಅಧಿಕೃತ ಲೋಗೋ ಬಿಡುಗಡೆ ಮಾಡಲಾಯಿತು.

10 ರಿಂದ 15 ಕಿ.ಮೀ ವ್ಯಾಪ್ತಿಗೆ ಮಾತ್ರವೇ ಸೀಮಿತ

ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಸುಮಾರು 35 ಲಕ್ಷ ರೂ.ಗಳ ವೆಚ್ಚದಲ್ಲಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಾನಸ ರೇಡಿಯೋ ಸ್ಟೇಷನ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಮುದಾಯ ರೇಡಿಯೋ ಮಾನಸ 10 ರಿಂದ 15 ಕಿ.ಮೀ ವ್ಯಾಪ್ತಿಗೆ ಮಾತ್ರವೇ ಸೀಮಿತವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ವಿವಿ ವ್ಯಾಪ್ತಿಯ ಚಾಮರಾಜನಗರ, ಹಾಸನ,ಮಂಡ್ಯದಲ್ಲಿಯೂ ರೇಡಿಯೋ ಕೇಂದ್ರ ಸ್ಥಾಪನಗೆ ಪ್ರಯತ್ನಿಸಲಾಗುವುದು ಎಂದರು.

ರೇಡಿಯೋ ಮಾನಸ ಆರಂಭಕ್ಕೆ ಶೈಕ್ಷಣಿಕ ಉದ್ದೇಶದಿಂದ ಅನುಮತಿ

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ರೇಡಿಯೋ ಮಾನಸ ಆರಂಭಕ್ಕೆ ಶೈಕ್ಷಣಿಕ ಉದ್ದೇಶದಿಂದ ಅನುಮತಿ ದೊರೆತಿದೆ. ಹೀಗಾಗಿ, ವಿವಿಯ 74 ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಬೋಧಕರು ಇದರಲ್ಲಿ ಭಾಗಿಯಾಗುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ,ಮಾಹಿತಿಯ ಜೊತೆಗೆ ಗುಣಮಟ್ಟದ ಮನರಂಜನೆಗೆ ಒತ್ತು

ಶಿಕ್ಷಣ,ಮಾಹಿತಿಯ ಜೊತೆಗೆ ಗುಣಮಟ್ಟದ ಮನರಂಜನೆಗೆ ಒತ್ತು ನೀಡಬೇಕು. ರೇಡಿಯೋ ಕೇಂದ್ರದ ಉತ್ತಮ ಬೆಳವಣಿಗೆಯ ದೃಷ್ಟಿಯಿಂದ ಸಲಹಾ ಸಮಿತಿಯೊಂದನ್ನು ರಚಿಸುವುದು ಉತ್ತಮ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಮಾರ್ಚ್ ತಿಂಗಳ ವೇಳೆಗೆ ರೇಡಿಯೋ ಕೇಂದ್ರ ಆರಂಭ Radio-Manasa-AIR-March

ಮೈಸೂರು ವಿವಿ ರೇಡಿಯೋ ಸ್ಟೇಷನ್ ರೇಡಿಯೋ ಮಾನಸ ಸಂಯೋಜಕಿ ಪ್ರೊ.ಎಂ.ಎಸ್‌.ಸಪ್ನಾ ಮಾತನಾಡಿ, ರೇಡಿಯೋ ಮಾನಸ ಆರಂಭಕ್ಕೆ ಅಂತಿಮ ಒಪ್ಪಿಗೆ ಪತ್ರ ದೊರೆಯಬೇಕಿದೆ. ಅದಾದ ಬಳಿಕ ಮಾರ್ಚ್ ತಿಂಗಳ ವೇಳೆಗೆ ರೇಡಿಯೋ ಕೇಂದ್ರ ಆರಂಭಿಸಲಾಗುವುದು ಎಂದರು.

ರೇಡಿಯೋ ಮಾನಸ ಸಮುದಾಯ ರೇಡಿಯೋ ಮಾದರಿಯಾಗಿದ್ದು, ಶೈಕ್ಷಣಿಕ, ಆರೋಗ್ಯ, ಸಂವಹನ, ಯುವಸಮುದಾಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ENGLISH SUMMARY…

“Radio Manasa” to go on air from March
Mysuru, Feb. 13, 2021 (www.justkannada.in): The Radio Manasa Kendra of the University of Mysore will start functioning in the Manasagaongtri campus from March, it reaches the people living 10 km radius.
The official logo of the University of Mysore’s radio station was released at a program held at the Vignana Bhavana on Saturday.
In his address, Prof. G. Hemanth Kumar, Vice-Chancellor, University of Mysore informed that the ‘Manasa Radio Station’ has been set-up at an estimated cost of Rs. 35 lakh, at the Senate Bhavan in Manasagangotri and it is limited only to 10-15 km radius. “Efforts will be made to establish radio stations in Chamarajanagara, Hassan, Mandya in the coming days,” he added.
Keywords: Prof. G. Hemanth Kumar/ Radio Manasa/ March/ University of Mysore

key words : Radio-Manasa-AIR-March

website developers in mysore