ಮೈಸೂರಿನಲ್ಲಿ ಶಾಂತವಾಯ್ತು  ಮಳೆ, ಪ್ರವಾಹ: ಮರಳಿ ಮನೆಗಳತ್ತ ಸಾವಿರಾರು ಸಂತ್ರಸ್ತರು….

ಮೈಸೂರು,ಆ,13,2019(www.justkannada.in) ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ನಲುಗಿದ್ದ ಮೈಸೂರು ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಧಾವಿಸಿದೆ.  ಜಿಲ್ಲೆಯ ನಂಜನಗೂಡು ಹೆಚ್,ಡಿ ಕೋಟೆ ಸೇರಿ ವಿವಿಧ ತಾಲ್ಲೂಕುಗಳಲ್ಲಿ ಅಬ್ಬರಿಸಿದ್ದ ಪ್ರವಾಹ ಈಗ ತಣ್ಣಗಾಗಿದೆ.

ನಂಜನಗೂಡಿನಲ್ಲಿ ಪ್ರವಾಹ ತಗ್ಗಿದ್ದು ಪರಿಹಾರಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಸಂತ್ರಸ್ತರು ಈಗ ಮರಳಿ ಮನೆಗಳತ್ತ ತೆರಳುತ್ತಿದ್ದಾರೆ.  ನಂಜನಗೂಡು ತಾಲೂಕಿನ ಹತ್ತು ಪರಿಹಾರ ಕೇಂದ್ರಗಳಿಂದಲೂ ಸಂತ್ರಸ್ತರು  ನಿನ್ನೆ ರಾತ್ರಿಯಿಂದಲೇ ಹೋಗುತ್ತಿದ್ದಾರೆ.

ಇನ್ನು ಮನೆಗಳು ಸಂಪೂರ್ಣ ಮುಳುಗಡೆಯಾಗಿರುವ ಕುಟುಂಬ ಮಾತ್ರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹತ್ತು ಪರಿಹಾರ ಕೇಂದ್ರಗಳಲ್ಲಿ 2 ಸಾವಿರ ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದರು. ನಂಜನಗೂಡು ಪ್ರವಾಹಕ್ಕೂ ಸರಿಸುಮಾರು ಐನೂರಕ್ಕೂ ಮನೆಗಳು ಮುಳುಗಡೆಯಾಗಿದ್ದವು. ಐವತ್ತಕ್ಕೂ ಹೆಚ್ಚು ಮನೆಗಳು ಕುಸಿದಿದ್ದವು. ಈಹ ಪ್ರವಾಹದಲ್ಲಿ ಸಿಲುಕಿರುವ ಮನೆಗಳು ಸ್ಥಿತಿ ನೋಡಲು ಸಂತ್ರಸ್ಥರು ಮರಳಿ ಮನೆಗಳತ್ತ ಧಾವಿಸುತ್ತಿದ್ದಾರೆ.

ಹೆಚ್.ಡಿ ಕೋಟೆಯಲ್ಲಿನ ಕಬಿನಿ ಡ್ಯಾಂಗೆ  40ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಜಲಾಶಯದಿಂದ 22ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯಬಿಡಲಾಗುತ್ತಿದೆ. ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮೈಸೂರಿನಾದ್ಯಂತ ಕಪಿಲಾ, ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಶಾಂತವಾಗಿವೆ.

Key words: Quiet -rain – flood- Mysore- Thousands – victims- return -home