ಬುದ್ಧಿ ಹೇಳಲು ಬಂದವರಿಗೆ ಬೆಂಕಿ ಹಚ್ಚಿದ ಭೂಪ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ.

Promotion

ಯಾದಗಿರಿ,ಜೂನ್,29,2022(www.justkannada.in): ದಂಪತಿ ನಡುವೆ ಜಗಳ ಹಿನ್ನೆಲೆ ಬುದ್ದಿ ಮಾತು ಹೇಳಲು ಬಂದವರಿಗೆ  ಪತಿ ಬೆಂಕಿ ಹಚ್ಚಿದ ಪರಿಣಾಮ, ಓರ್ವ ಸಾವನ್ನಪ್ಪಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಶರಣಪ್ಪ ಎಂಬಾತನೇ ಬುದ್ದಿ ಹೇಳಲು ಬಂದವರಿಗೆ ಬೆಂಕಿಹಚ್ಚಿದ ಭೂಪ. ಹೆಂಡತಿ ವಿಚ್ಛೇದನ ಕೊಡಲಿಲ್ಲ ಎಂದು ಗಲಾಟೆ ಮಾಡಿದ್ದ ಶರಣಪ್ಪನನ್ನು ಸಮಾಧಾನಪಡಿಸಿ, ಬುದ್ಧಿ ಹೇಳಲು ಹೋದವರಿಗೆ ಈತ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಹಲವು ದಿನಗಳಿಂದ ಗಂಡ ಶರಣಪ್ಪ, ಹೆಂಡತಿ ಹುಲಗಮ್ಮ ಇಬ್ಬರು ಜಗಳವಾಡುತ್ತಿದ್ದರು. ಹುಲಗಮ್ಮ ತವರು ಮನೆಯ ನಾಲ್ಕು  ಮಂದಿ ಬುದ್ದಿಮಾತು ಹೇಳಲು ಬಂದಿದ್ದರು. ಬುದ್ಧಿ ಮಾತು ಹೇಳಲು ಬಂದ ನಾಲ್ಕು ಜನರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ನಾಗಪ್ಪ ಸಾವನ್ನಪ್ಪಿದ್ದು,  ಶರಣಪ್ಪ. ಸಿದ್ರಾಮಪ್ಪ, ಮುತ್ತಪ್ಪ, ಶರಣಪ್ಪ ಗಂಭೀರ ಗಾಯಗೊಂಡಿದ್ದಾರೆ. ಇವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Quarrel – couple-fire –yadgiri- One death