ಚಾಮುಂಡಿಬೆಟ್ಟಕ್ಕೆ ಹೋಗೆ ಹೋಗ್ತೀವಿ, ತಡೆದ್ರೆ: ಜಿಲಾಡಳಿತ, ಪೊಲೀಸ್ ಆಯುಕ್ತರ ವಿರುದ್ಧ ಕೇಸ್ ಹಾಕ್ತೀವಿ ಎಂದ ಪುರುಷೋತ್ತಮ್

ಮೈಸೂರು, ಸೆಪ್ಟೆಂಬರ್ 25, 2022 (www.justkannada.in): ಚಾಮುಂಡಿಬೆಟ್ಟಕ್ಕೆ ಹೋಗೆ ಹೋಗ್ತೀವಿ. ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಂದು ‌ವೇಳೆ ತಡೆದರೆ ನಾವು ಅಟ್ರಾಸಿಟಿ ಕೇಸ್ ಹಾಕ್ತೀವಿ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿಕೆ ನೀಡಿದ್ದಾರೆ.

ಜಿಲಾಡಳಿತ, ಪೊಲೀಸ್ ಆಯುಕ್ತರ ವಿರುದ್ಧ ಕೇಸ್ ಹಾಕ್ತೀವಿ. ಸಂವಿಧಾನ ವಿರೋಧಿ ನಡೆಯಿದು. ನಮ್ಮ ಹೋರಾಟವನ್ನ ಹತ್ತಿಕ್ಕುವ ಕೆಲಸ ಆಗ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ರಾಷ್ಟ್ರಪತಿಗಳು ಮೂಲ ಮಹಿಷನ ವಂಶಸ್ಥರು. ಅಂತಹವರಿಗೂ ಕೂಡ ಅಪಮಾನ ಮಾಡಲಾಗ್ತಿದೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಪಾರ್ಕ್ ನಲ್ಲಿ ಕಾರ್ಯಕ್ರಮ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ನಿರ್ಬಂಧ ಹಿನ್ನೆಲೆಯಲ್ಲಿ ಮೈಸೂರಿನ ಅಶೋಕಪುರಂ ಬಳಿಯ ಡಾ. ಬಿ ಆರ್ ಅಂಬೇಡ್ಕರ್ ಪಾರ್ಕ್ ನಲ್ಲಿ ಕಾರ್ಯಕ್ರಮ ಆಚರಿಸಲಾಯಿತು.

ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಹಿಷ ದಸರಾ ಹೋರಾಟ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮೆರವಣಿಗೆಗೆ ಪೋಲೀಸರ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪುಷ್ಪಾರ್ಚನೆಗೆ ಮಹಿಷ ದಸರಾ ಸೀಮಿತವಾಯಿತು.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಹಿರಿಯ ಸಾಹಿತಿ ಪ್ರೊ.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.