ನೀರು ಶುದ್ದೀಕರಣ ಘಟಕ ಕಾಮಗಾರಿ ಹಿನ್ನೆಲೆ: ಸಾರ್ವಜನಿಕರು ನೀರನ್ನು ಕಾಯಿಸಿ ಉಪಯೋಗಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ

ಮೈಸೂರು ಆ.12.2019(www.justkannada.in): ನೀರು ಶುದ್ದೀಕರಣ ಘಟಕ ಕಾಮಗಾರಿ ನಡೆಸಲಾಗುತ್ತಿದ್ದು ಈ ಹಿನ್ನೆಲೆ ನಗರದ ಕೆಲ ವಾರ್ಡ್ ಗಳ ಸಾರ್ವಜನಿಕರು  ನೀರನ್ನು ಕಾಯಿಸಿ ಉಪಯೋಗಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ವಿಭಾಗ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.

ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 3ನೇ ಹಂತದ ಶುದ್ದೀಕರಣ ಘಟಕಗಳಾದ  ಕ್ಲಾರಿಫೈಯರ್ ಮತ್ತು ಫಿಲ್ಟರ್ ಬೆಡ್ ಘಟಕಗಳ ದುರಸ್ಥಿ ಮತ್ತು ಅಭಿವೃದ್ದಿ ಕಾಮಗಾರಿಗಳನ್ನು ಅಮೃತ್ ಯೋಜನೆಯಡಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ನೀರನ್ನು ಸೂಕ್ತ ಪ್ರಮಾಣದಲ್ಲಿ ಶುದ್ಧೀಕರಣಗೊಳಿಸಲು ಸಾದ್ಯವಾಗುತ್ತಿರುವುದಿಲ್ಲ.

ಇದರಿಂದ ಮೈಸೂರು ನಗರದ ವಿಜಯನಗರ ವ್ಯಾಪ್ತಿಯಲ್ಲಿರುವ ಕೇಂದ್ರ ಜಲಸಂಗ್ರಹಾಗಾರದಿಂದ ಬಡಾವಣೆಗಳಿಗೆ ಸರಬರಾಜಾಗುವ ನೀರು ಮಣ್ಣಿನಂಶದಿಂದ (Turbid water) ಕೂಡಿರುವ ಸಾದ್ಯತೆ ಇರುವುದರಿಂದ ಸಾರ್ವಜನಿಕರು ನೀರನ್ನು ಕಾಯಿಸಿ ಉಪಯೋಗಿಸಬೇಕೆಂದು ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ ನೀರು ಸರಬರಾಜು ವಿಭಾಗ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ನಗರದ ವಾರ್ಡ್ ನಂ. 1 ರಿಂದ 6, 18 ರಿಂದ 21, 42 ರಿಂದ 47 ರವರೆಗೆ, ಇದಕ್ಕೆ ಸಂಬಂಧಪಟ್ಟ ಡಿ.ಎಂ.ಎ. ಪ್ರದೇಶಗಳು ಹಾಗೂ ಹೊರವಲಯಗಳಾದ ಆರ್.ಎಂ.ಪಿ.  ಬಿ.ಇ.ಎಂ.ಎಲ್. ವಿಜಯನಗರ 3ನೇಹಂತ, ಹೆಬ್ಬಾಳು 1ನೇಹಂತ, 2ನೇಹಂತ ಮತ್ತು 3ನೇಹಂತ, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ವಿನಾಯಕನಗರ, ಮಂಜುನಾಥಪುರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿಜಯನಗರ 1 ಮತ್ತು 2ನೇ ಹಂತ, ಗೋಕುಲಂ, ಯಾದವಗಿರಿ, ಇರ್ವೀನ್ ರಸ್ತೆ, ಸೊಪ್ಪಿನಕೇರಿ, ರಮಾವಿಲಾಸ ರಸ್ತೆ, ಸಯ್ಯಾಜಿರಾವ್ ರಸ್ತೆ, ಒಕ್ಕಲಗೇರಿ, ಶಿವರಾಂಪೇಟೆ, ಗಂಗೋತ್ರಿ ಬಡಾವಣೆ, ಶಾರದದೇವಿನಗರ, ಟಿ.ಕೆ.ಲೇಔಟ್ ಹಾಗೂ ಇತ್ಯಾದಿ ಪ್ರದೇಶಗಳಿಗೆ ಈ ನೀರು ಸರಬರಾಜು ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Key words: Purification Unit -Work -Drink -boiling –water-mysore