ಪುನೀತ್ ‘ಪವರ್’ ಫಿಟ್ನೆಸ್ ನೋಡಿ ದಂಗಾದ ಫ್ಯಾನ್ಸ್, ಸೆಲೆಬ್ರೆಟಿಗಳು

ಬೆಂಗಳೂರು, ಜೂನ್ 05, 2020 (www.justkannada.in): ಪುನೀತ್​ ಆಗಾಗ ತಮ್ಮ ಫಿಟ್ನೆಸ್​ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ನಿನ್ನೆಯಷ್ಟೆ ಅವರು ಹೊಸ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಅದನ್ನು ನೋಡಿದ ಅವರ ಫ್ಯಾನ್ಸ್ ಜತೆಗೆ ನಟ, ನಟಿಯರೂ ಫಿದಾ ಆಗಿದ್ದಾರೆ.

ಪುನೀತ್​ ರಾಜ್​ಕುಮಾರ್ ಜಿಮ್​ನಲ್ಲಿ ಮಾತ್ರವಲ್ಲದೆ ಮನೆಯ ಹೊರಗೂ ಫಿಟ್ನೆಸ್​ಗಾಗಿ ಸಾಕಷ್ಟು ಒತ್ತು ಕೊಡುತ್ತಾರೆ. ಆಗಾಗ ನಂದಿ ಬೆಟ್ಟಕ್ಕೆ ಸೈಕಲ್​ನಲ್ಲಿ ಹೋಗುತ್ತಾರೆ. ಇದು ಸಹ ಈ ಹಿಂದೆ ಸುದ್ದಿಯಾಗಿತ್ತು.

ಸದ್ಯ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿರುವ ಪುನೀತ್ ರಾಜ್​ ಕುಮಾರ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.