ಸದನದಲ್ಲಿ ಪಿಎಸ್ ಐ ನೇಮಕಾತಿ ಹಗರಣ ಪ್ರತಿಧ್ವನಿ: ಸಿಎಂ ಬೊಮ್ಮಾಯಿ ಮತ್ತು ಸಿದ್ಧರಾಮಯ್ಯ ಜಟಾಪಟಿ, ವಾಕ್ಸಮರ.

ಬೆಂಗಳೂರು,ಸೆಪ್ಟಂಬರ್,20,2022(www.justkannada.in): ವಿಧಾನ ಮಂಡಲ ಅಧಿವೇಶನದಲ್ಲಿ ಹಲವು ವಿಚಾರಗಳು ಚರ್ಚೆಯಾಗುತ್ತಿದ್ದು ಈ ನಡುವೆ ಪಿಎಸ್ ಐ ನೇಮಕಾತಿ ಹಗರಣದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಸದನದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ಪ್ರಸ್ತಾಪವಾಗಿ  ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕ ಸಿದ್ಧರಾಮಯ್ಯ ನಡುವೆ ವಾಕ್ಸಮರ ನಡೆಯಿತು. ಇದು ಅತ್ಯಂತ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ಬಯಲಾಗುತ್ತೆ ಎಂದು  ಅವಕಾಶ ಕೊಡ್ತಿಲ್ಲ. ಸರ್ಕಾರ ನಡೆಸುವಲ್ಲಿ ನೀವು ವಿಫಲರಾಗಿದ್ದೀರಿ. ನಿಮಗೆ ನಾನೇ ಟಾರ್ಗೆಟ್.  ಚುನಾವಣೆಗೆ ಹೋಗೋಣ ಬನ್ನಿ ಎಂದು ಸಿದ್ಧರಾಮಯ್ಯ ಸವಾಲೆಸೆದರು.

ಈ ವೇಳೆ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ,  ನೀವು ವಿಪಕ್ಷದಲ್ಲಿರಲು ವಿಫಲರಾಗಿದ್ದೀರಿ. ಎಲ್ಲಾ ಚರ್ಚೆಗೆ ನಾವು ಸಿದ್ದ ಉತ್ತರ ಕೊಡಲು ನಾವು ರೆಡಿ. ನಿಮ್ಮ ಅವಧಿಯಲ್ಲಿ  ಏನು ಆಗೇ ಇಲ್ವಾ..? ನಿಮ್ಮ ಕಾಲದಲ್ಲಿ ಪಿಎಸ್ ಐ ಹಗರಣ ತನಿಖೆ ಕೊಟ್ಟಿಲ್ವಾ. ಪ್ರಕರಣ ಮುಚ್ಚಿಹಾಕಿದ್ದು ನೀವು ಎಂದು  ಗುಡುಗಿದರು.

ನೀವು ಏನ್ ಮಾಡಿದ್ರಿ..? ಒಂದು ವೇಳೆ ನಾವು ಅಕ್ರಮ ಮಾಡಿದ್ರೇ ಕೂಡಲೇ ತನಿಖೆ ನಡೆಸಿ ಎಂದು ಆಗ್ರಹಿಸಿದ ಸಿದ್ಧರಾಮಯ್ಯ ಭ್ರಷ್ಟಾಚಾರ ಮುಚ್ಚಿಡಲು ಗಲಾಟೆ ಮಾಡುತ್ತಿದ್ದಾರೆ ಚರ್ಚೆ ಮಾಡಿದ್ರೆ ಭ್ರಷ್ಟಾಚಾರ ಹೊರ ಬರುತ್ತೆ ಎಂಬ ಭಯವಿದೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿನ ನೇಮಕಾತಿಗಳ ಬಗ್ಗೆಯೂ ತನಿಖೆ ನಡೆಸಿ ಎಂದು ಸವಾಲೆಸೆದರು.

Key words: PSI -recruitment -scam -CM –Bommai-Siddaramaiah