ಕೊಡವರಿಗೆ ಎಸ್.ಟಿ ಟ್ಯಾಗ್ ಮೂಲಕ ರಾಜ್ಯಾಂಗ ಭದ್ರತೆ ನೀಡಿ- ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ….

kannada t-shirts

ಮೈಸೂರು,ಅಕ್ಟೋಬರ್,13,2020(www.justkannada.in): ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಅದಿಮಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು. ಕೊಡವರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು  ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ನಾಚಪ್ಪ ಆಗ್ರಹಿಸಿದರು.jk-logo-justkannada-logo

ಕೊಡವರಿಗೆ ಎಸ್.ಟಿ ಟ್ಯಾಗ್ ಮೂಲಕ ರಾಜ್ಯಾಂಗ ಭದ್ರತೆ ನೀಡುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ಎಂ.ಯು.ನಾಚಪ್ಪ, ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಅದಿಮಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು. ಜನರ ಆಶೋತ್ತರಗಳನ್ನು ಪರಿಗಣಿಸುವುದು ಸಂವಿಧಾನದ 7 ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಕೊಡವರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು. ಈ ಸಾಂವಿಧಾನಿಕ ಪರಿಹಾರಕ್ಕಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿ ಕಸರತ್ತು ಮಾಡಬೇಕು. ಕೊಡವ ಬುಡಕಟ್ಟು ಕುಲಕ್ಕೆ ಎಸ್.ಟಿ ಪಟ್ಟಿಯಲ್ಲಿ ಮಾನ್ಯತೆ ದೊರಕಬೇಕು. ಆ ಮೂಲಕ ವಿನಾಶದಂಚಿನಲ್ಲಿರುವ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟನ್ನು ಜನರು ಸೇರಿದಂತೆ ಜನಪದಿಯ ಸಂಸ್ಕೃತಿ ,ಸಾಂಪ್ರಾದಾಯಿಕ ಕಾಯ್ದೆ ಪೂರ್ವಜಿತ ಭೂಮಿ ಇತ್ಯಾದಿಗಳಿಗೆ ರಾಜ್ಯಾ0ಗ ಖಾತ್ರಿ ನೀಡಬೇಕು  ಎಂದು ಆಗ್ರಹಿಸಿದರು.provide-kodava-st-state-security-kodava-national-council-request-mysore

ಕೊಡವ ಹಕ್ಕುಗಳನ್ನು ನಿರಾಕರಣೆ ಮಾಡಬಾರದು. ಅಪ್ಪಟ ದೇಶ ಪ್ರೇಮಿಗಳಾದ ಕೊಡವರಿಗೆ ಸಂವಿಧಾನದ ಅಡಿ ಎಲ್ಲಾ ರೀತಿಯ ಭದ್ರತೆ ಕೊಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.

Key words: Provide -Kodava – ST-State- Security – Kodava National Council- request-mysore

website developers in mysore