ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಪ್ರಗತಿಪರರು ಮತ್ತು ರೈತಸಂಘದ ಮುಖಂಡರಿಂದ ಪ್ರತಿಭಟನೆ…

Promotion

ಮೈಸೂರು,ಡಿ,19,2019(www.justkannada.in): ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಪ್ರಗತಿಪರರು ಮತ್ತು ರೈತಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಪೋಲಿಸ್ ಆಯುಕ್ತರ ಕಚೇರಿ ಮುಂಭಾಗ ಜಮಾಯಿಸಿದ  ಪ್ರಗತಿಪರರು ಹಾಗು ರೈಸ ಸಂಘದ ಮುಖಂಡರು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ಪೋಲಿಸ್ ಆಯುಕ್ತ ಕೆಟಿ ಬಾಲಕೃಷ್ಣ , ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದರು.

ಆಯುಕ್ತ ಕಚೇರಿ ಸಭಾಂಗಣದಲ್ಲಿ ಪ್ರತಿಭಟನಾಕಾರರೊಂದಿಗೆ  ಮಾತುಕತೆ ನಡೆಸಿದ ನಗರ ಪೊಲೀಸ್ ಆಯುಕ್ತ ಕೆಟಿ ಬಾಲಕೃಷ್ಣ , ರಾಜ್ಯದಾದ್ಯಂತ 144 ಸಕ್ಷನ್ ಜಾರಿ ಆಗಿದೆ. ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ. ಇನ್ನು ಮೂರು ದಿನ ಯಾವದೇ ಪ್ರತಿಭಟನೆ ಮಾಡಬಾರದು. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಬೇಕು. ಕಾನೂನಿಗೆ ಭಂಗ ತರೊ ಕೆಲಸ ಮಾಡಬಾರದೆಂದು ಮನವಿ ಮಾಡಿದರು.

ಈ ವೇಳೆ ಪ್ರತಿಭಟನೆಗೆ ಅವಕಾಶ ನೀಡುವಂತೆ ಪ್ರಗತಿಪರರು ಪಟ್ಟು ಹಿಡಿದರು. ಆದರೆ ನಿಷೇಧಾಜ್ಞೆ ಮುಗಿದ ಬಳಿಕ ಪ್ರತಿಭಟನೆಗೆ ಅವಕಾಶ ನೀಡುವುದಾಗಿ ಪೋಲೀಸರು ತಿಳಿಸಿದರು.

Key words: Protests – Mysore – protest-  farmers- leaders- Oppose – Citizenship Act Amendment