ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ: ಚಾಮರಾಜನಗರದಲ್ಲಿ 144 ಸೆಕ್ಷನ್ ಜಾರಿ..

ಚಾಮರಾಜನಗರ,ಡಿ,19,2019(www.justkannada.in): ಪೌರತ್ವತಿದ್ದುಪಡಿ ಮಸೂದೆ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಹಿನ್ನೆಲೆ  ಚಾಮರಾಜನಗರ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ 144  ಸೆಕ್ಷನ್ ಜಾರಿ ಮಾಡಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ಕಿಚ್ಚು ಜೋರಾಗಿದೆ. ಈ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಕಲ್ಬುರ್ಗಿ ಸೇರಿ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಡುವೆ ಚಾಮರಾಜನಗರದಲ್ಲೂ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಚಾಮರಾಜನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ  ಜಿಲ್ಲಾಧಿಕಾರಿ  ಬಿ ಬಿ ಕಾವೇರಿ ರವರಿಂದ ಆದೇಶ ಹೊರಡಿಸಿದ್ದಾರೆ. ದಿನಾಂಕ 19-12-19 ಮಧ್ಯಾರಾತ್ರಿಯಿಂದ 21-12-19ವರೆಗೆ ಐಪಿಸಿ ಸೆಕ್ಷನ್ 144  ಅನ್ವಯವಾಗಲಿದೆ. 144 ಕಲಾಂ ಜಾರಿ ಹಿನ್ನಲೆ ಯಾರು ಕೂಡ ಗುಂಪು ಗುಂಪಾಗಿ ಓಡಾಡುವಂತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಲೆ, ಕಾಲೇಜ್ ಹಾಗೂ ಮದುವೆ ಸಮಾರಂಭಗಳಿಗೆ ಇದು ಅನ್ವಯ ಆಗುವುದಿಲ್ಲ. ಎಂದಿನಂತೆ ಶಾಲೆ ಕಾಲೇಜುಗಳು  ನಡೆಯಲಿವೆ. ಜಿಲ್ಲೆಯ ಜನರ ಶಾಂತತೆ ಕಾಪಾಡುವಂತೆ  ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Key words: Protests -against – Citizenship Amendment Act-Section 144- enforcement – Chamarajanagar.