ರೈಲ್ವೆ ಖಾಸಗೀಕರಣ ವಿರೋಧಿಸಿ  ಮೈಸೂರಿನಲ್ಲಿ ಪ್ರತಿಭಟನೆ…

kannada t-shirts

ಮೈಸೂರು,ನವೆಂಬರ್,23,2020(www.justkannada.in)  ರೈಲ್ವೆ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ  ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.protest-mysore-against-railway-privatization

ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಹಾಗೂ ಚಾಮರಾಜನಗರ ಪ್ಯಾಸೆಂಜರ್ ರೈಲನ್ನು ಪುನಃ ಪ್ರಾರಂಭಿಸಬೇಕು ಜೊತೆಗೆ ರೈಲ್ವೆ ಪ್ಲ್ಯಾಟ್ ಫಾರ್ಮ್ ದುಬಾರಿ ಟಿಕೆಟ್ ದರ ಹಿಂಪಡೆಯುವಂತೆ ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.protest-mysore-against-railway-privatization

ಪ್ರತಿಭಟನೆಯಲ್ಲಿ ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಮಿತಿ ಸದಸ್ಯರಾದ ಎಂ. ಉಮಾದೇವಿ, ಸಂಧ್ಯಾ ಪಿ. ಎಸ್, ಸೀಮಾ ಜಿ. ಎಸ್, ಹರೀಶ್ ಸೇರಿದಂತೆ ಸಮಿತಿ ಸದಸ್ಯರು ಭಾಗಿಯಾಗಿದ್ದರು.

Key words- Protest – Mysore –against- railway- privatization

website developers in mysore