ಬೆಲೆ ಏರಿಕೆ ವಿರುದ್ಧ ಹೋರಾಟ: ನಾಳೆ ರೂಪುರೇಷೆ ಘೋಷಣೆ-ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…

ಚಿತ್ರದುರ್ಗ,ಫೆಬ್ರವರಿ,2,2021(www.justkannada.in): ದೇಶದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದೆ. ಆಡಳಿತದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು ಇದಕ್ಕಾಗಿ ನಾಳೆ ರೂಪುರೇಷೆ ಘೋಷಣೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್.  ಬಿಜೆಪಿ ದೇಶಕ್ಕೆ ಕೆಟ್ಟ ಬಜೆಟ್ ನೀಡಿದೆ. ಯಾವ ವರ್ಗದವರಿಗೂ ಬಜೆಟ್ ಬಗ್ಗೆ ಸಮಾಧಾನ, ಉತ್ಸಾಹವೇ ಇಲ್ಲ. ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ವರ್ಗಕ್ಕೆ ತೊಂದರೆ ಆಗಿದೆ ಎಂದು ಟೀಕಿಸಿದರು.

ಡೀಸೆಲ್, ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದೆ. ಆಡಳಿತ ವಿರುದ್ಧ ಜನ ರೊಚ್ಚಿಗೆ ಎದ್ದಿದ್ದಾರೆ. ಏಕೆ ಸುಮ್ಮನೆ ಕುಳಿತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಬೆಲೆ ಏರಿಕೆ ವಿರುದ್ದ ನಾವು ಹೋರಾಟ ಮಾಡುತ್ತೇವೆ. ನಾಳೆ ರೂಪುರೇಷೆ ಘೋಷಣೆ ಮಾಡುತ್ತೇವೆ.  ರೈತರ ಪರ ನಿಲ್ಲುವ ಕಾರ್ಯಕ್ರಮಗಳನ್ನು ನಾಳೆ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.protest- Against –Prices hike-KPCC President -DK Sivakumar

‘ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಕೊರೋನಾ ಸೋಂಕಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಹಾಸಿಗೆ, ದಿಂಬು, ಔಷಧಿಯಲ್ಲಿ ಭ್ರಷ್ಟಾಚಾರ ಮಾಡಿದವರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

Key words: protest- Against –Prices hike-KPCC President -DK Sivakumar