ಆಸ್ತಿ ತೆರಿಗೆ ಪಾವತಿಸಲು ಇನ್ಮುಂದೆ ಮೈಸೂರು ಮಹಾನಗರ ಪಾಲಿಕೆಗೆ ಹೋಗಬೇಕಾಗಿಲ್ಲ…

ಮೈಸೂರು,ಮಾ,3,2020(www.justkannada.in): ಮೈಸೂರಿನ ಜನರು ಆಸ್ತಿ ತೆರಿಗೆ ಪಾವತಿಸಲು ಮೈಸೂರು ಮಹಾನಗರ ಪಾಲಿಕೆಗೆ ತೆರಳಿ ಕೌಂಟರ್ ನಲ್ಲಿ ನಿಂತು ಕಾಯುವುದು ತಪ್ಪಲಿದೆ. ಹೌದು  ಆಸ್ತಿ ತೆರಿಗೆಯನ್ನು ಇನ್ನ ಮುಂದೆ ಆನ್ ಲೈನ್ ನಲ್ಲೂ ಪಾವತಿಸಬಹುದು. ತೆರಿಗೆ ಪಾವತಿಸಲು ನೂತನ ಆರ್ಥಿಕ ವರ್ಷದಿಂದ ಆನ್ ಲೈನ್  ಸೇವಾ ಸೌಲಭ್ಯ ಲಭ್ಯವಿರಲಿದೆ.

ಆನ್ ಲೈನ್ ಸೇವೆ ಜಾರಿಗೆ ಬಂದರೇ ಆಸ್ತಿ ತೆರಿಗೆ ಪಾವತಿ ಮಾಡುವವರು  ಇನ್ನುಂದೆ ಪಾಲಿಕೆಗೆ ಹೋಗ ಬೇಕಾಗಿಲ್ಲ..! ಮನೆಯಲ್ಲೆ ಕುಳಿತು ತೆರಿಗೆ ಪಾವತಿಸಬಹುದು. ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಆಸ್ತಿ ತೆರಿಗೆಯನ್ನು ಇನ್ನಮುಂದೆ ಆನ್ ಲೈನ್ ನಲ್ಲೂ ಪಾವತಿಸಬಹುದು. ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಅವಕಾಶ ಕಲ್ಪಿಸಿದೆ. ಏಪ್ರಿಲ್ 1 ರಿಂದಲೆ ಆನ್ ಲೈನ್ ಮೂಲಕ ತೆರೆಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಮಾಡಲು ನಲವತ್ತುಕ್ಕೂ ಹೆಚ್ವು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ ಒಂದರಿಂದ ಆನ್ ಲೈನ್ ಮೂಲಕ ಪಾವತಿಸಿಲು ಅವಕಾಶ ಮಾಡಿಕೊಡಲಾಗುವುದು. ವಿವಿಧ ಆ್ಯಪ್ ಗಳ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ಪಾರದರ್ಶಕತೆ ಅವರ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ದೊರೆಯುತ್ತದೆ. ಜೊತೆಗೆ ಜನರು ಕೌಂಟರ್ ನಲ್ಲಿ ನಿಂತು ತೆರಿಗೆ ಪಾವತಿ ಮಾಡುವುದು ತಪ್ಪುತ್ತದೆ. ಇದರಿಂದ ಪಾಲಿಕೆ ಕೂಡ ಹೆಚ್ವು ತೆರೆಗೆ ಸಂಗ್ರಹಿಸಲು ನೆರವಾಗುತ್ತದೆ. ಜನರಿಗೂ ಪಾಲಿಕೆಗೂ ಇದರಿಂದ ಅನುಕೂಲ ಆಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Key words: property tax- pay –online- Mysore-city -corporation