ಕೋವಿಡ್ ನಿಂದ ಅನಾಥವಾಗಿರುವ ಮಕ್ಕಳಿಗೆ ಹಣಕಾಸಿನ ನೆರವು ಒದಗಿಸಲು ‘ಪ್ರಾಜೆಕ್ಟ್ ಆಲಂಬನ’

ಮೈಸೂರು, ಮೇ 29, 2021(www.justkannada.in): ಕೊರೋನಾ 2ನೇ ಅಲೆಯಲ್ಲಿ ಇಡೀ ಕುಟುಂಬಗಳು ಕೋವಿಡ್ ಸೋಂಕಿಗೆ ಈಡಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ನಾವೆಲ್ಲರೂ ಜೊತೆಗೂಡಿ ಇದನ್ನು ತಪ್ಪಿಸಬೇಕಿದೆ. ವಿದ್ಯಾ ಚೇತನ ಸಂಸ್ಥೆ ಸೇವಾ ಇಂಟರ್‌ನ್ಯಾಷನಲ್‌ ನ ಸಹಯೋಗದೊಂದಿಗೆ, ಕೋವಿಡ್ ಮಹಾಮಾರಿಯಿಂದಾಗಿ ಓರ್ವ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವಂತಹ ಮಕ್ಕಳಿಗೆ ಹಣಕಾಸಿನ ನೆರವನ್ನು ನೀಡಲು ಬಯಸಿದೆ.jk

ಇಂತಹ ಕುಟುಂಬಗಳ ಸದಸ್ಯರಿಗೆ ತಮ್ಮ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ‘ಪ್ರಾಜೆಕ್ಟ್ ಆಲಂಬನ್’ ಮೂಲಕ ಒಟ್ಟಾರೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬೆಂಬಲವನ್ನು ಒದಗಿಸಲು ವಿದ್ಯಾ ಚೇತನ ಸಂಸ್ಥೆ ಸೇವಾ ಇಂಟರ್‌ನ್ಯಾಷನಲ್‌ ಮುಂದಾಗಿದೆ.

ಇಂತಹ ಬೆಂಬಲದ ಅಗತ್ಯವಿರುವ ಕುಟುಂಬಗಳು ನಿಮಗೆ ಗೊತ್ತಿದ್ದಲ್ಲಿ ಅವರ ವಿವರಗಳನ್ನು ಈ ಕೆಳಕಂಡ ಲಿಂಕ್ ನಲ್ಲಿ ಒದಗಿಸಿ:

ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: https://bit.ly/vcalmbneng

ದೂರವಾಣಿ:    9019704406/96636 69257

ಇಮೇಲ್:   vidyachetana@youthforseva.org

ಹೆಚ್ಚಿನ ಮಾಹಿತಿಗಾಗಿ vidyachetana@youthforseva.org ಅಂತರ್ಜಾಲತಾಣಕ್ಕೆ ಭೇಟಿ ನೀಡಿ.

Key words: Project Avallamban – provide -financial -assistance – orphaned -children – covid