ನಾವು ಹೋರಾಟ ಮಾಡುವಾಗಲೆಲ್ಲಾ ನಿಷೇಧಾಜ್ಞೆ: ನಮ್ಮ ಮೇಲೆ ಕೇಸ್ ಹಾಕುವುದು ಸರ್ಕಾರದ  ಒಂದು ಚಾಳಿ-ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಆಗಸ್ಟ್, 23,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋ ಹಮ್ಮಿಕೊಂಡಿದ್ದು ಈ ಮಧ್ಯೆ ಸರ್ಕಾರ ನಾಳೆಯಿಂದ ನಾಲ್ಕು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಸರ್ಕಾರದ ಈ ನಡೆಯನ್ನ ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ನಾವು ಹೋರಾಟ ಮಾಡುವಾಗ  ಯಾವಾಗಲೂ ನಿಷೇಧಾಜ್ಞೆ ಹಾಕ್ತಾರೆ. ನಮ್ಮ ಮೇಲೆ ಕೇಸ್  ಹಾಕುವುದು ಸರ್ಕಾರದ ಒಂದು ಚಾಳಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಶಾಶಕಾಂಗ ಪಕ್ಷದ  ನಾಯಕರ ಜೊತೆ ಮಾತನಾಡುತ್ತೇವೆ. ಒಂದು ಗಂಟೆಯೊಳಗಾಗಿ  ನಮ್ಮ ನಿರ್ಧಾರ ತಿಳಿಸುತ್ತೇವೆ. ಬಿಜೆಪಿಯತವರು ಏನುಬೇಕಾದರೂ ಮಾಡಬಹುದು ಎಂದರು.

Key words: Prohibition-kodagu -government – DK Shivakumar