ವಿಶ್ವದ ಅಗ್ರ ಶ್ರೇಣಿ ವಿಜ್ಞಾನಿ : ಎರಡನೇ ಬಾರಿಗೆ ಸ್ಥಾನ ಪಡೆದ ಮೈಸೂರಿನ ಪ್ರೊ. ಕೆ.ಎಸ್. ರಂಗಪ್ಪ.

 

ಮೈಸೂರು, ಅಕ್ಟೋಬರ್ ೨೫, ೨೦೨೧ (www.justkannada.in): ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ರಾಸಾಯನಶಾಸ್ತ್ರ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸಾವಯವ ರಾಸಾಯನಿಕ ಕ್ಷೇತ್ರದಲ್ಲಿ ವಿಶ್ವದ ೨% ಅತ್ಯುತ್ತಮ ವಿಜ್ಞಾನಿಗಳ ಪೈಕಿ ಎರಡನೆಯ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಈ ರ್ಯಾಂಕಿಂಗ್ ಪಟ್ಟಿಯನ್ನು ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತದೆ. ೨೦೨೦ರಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಡಾ. ಕೆ.ಎಸ್. ರಂಗಪ್ಪ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ, ಅಕ್ಟೋಬರ್ ೧೯, ೨೦೨೧ರಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವರದಿಯಲ್ಲಿ ಈ ಪ್ರಶಂಸೆ ನೀಡಲಾಗಿದೆ.

ಇದರೊಂದಿಗೆ, ಇದೇ ಸಂಸ್ಥೆ ಮತ್ತೊಂದು ವರದಿಯನ್ನು ಸಿದ್ಧಪಡಿಸಿದ್ದು, ೨೦೨೦ರ ಕ್ಯಾಲೆಂಡರ್ ವರ್ಷದಲ್ಲಿ ಸಂಸ್ಥೆ ವಿಶ್ವದ ಅತ್ಯುತ್ತಮ ೨% ವಿಜ್ಞಾನಿಗಳನ್ನು ಅನ್ವೇಶಿಸಿತ್ತು. ಪ್ರೊ. ರಂಗಪ್ಪ ಅವರು ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ೬೦ ವರ್ಷಗಳಿಗೆ ಮೇಲ್ಪಟ್ಟಂತಹ ವಿಜ್ಞಾನಿಗಳ ಪೈಕಿ ಈ ಪ್ರಶಂಸೆಗೆ ಪಾತ್ರವಾಗಿರುವ ಏಕೈಕ ವಿಜ್ಞಾನಿ ಎನಿಸಿಕೊಂಡಿದ್ದಾರೆ.
ವಿಶ್ವದ ೨% ಅತ್ಯುನ್ನತ ವಿಜ್ಞಾನಿಗಳ ಶ್ರೇಯಾಂಕದ ವಿವರಗಳನ್ನು ಈ ಕೆಳಕಂಡ ವೆಬ್‌ಲಿಂಕ್‌ನಲ್ಲಿ ನೋಡಬಹುದು.

ex-vice-chancellor-prof-ks-rangappa-got-appointed-for-central-government-many-posts

August 2021 data-update for “Updated science-wide author databases of standardized citation indicators”

KEY WORDS : Prof. K. S. Rangappa- Distinguished Professor- University of Mysore- top 2% of world scientists.

ENGLISH SUMMARY :

Prof. K. S. Rangappa, Distinguished Professor of the University of Mysore has appeared consecutively for the second time in the list of the top 2% of world scientists in the field of organic chemistry. The ranking list is prepared by Stanford University, Stanford, USA. Considering his research contributions in 2020, his ranking has been uplifted in the report published by Stanford University on 19 October 2021. Along with this, another report has also been prepared by the same organization in which the top 2% of scientists were analyzed solely in the calendar year 2020. Professor Rangappa is the only scientist who appeared in the list from the state universities of Karnataka in the age group of above 60 years
The data relating to the ranking of the top 2% of world scientists can be found in the following weblink.
August 2021 data-update for “Updated science-wide author databases of standardized citation indicators”