ಮೈಸೂರು ವಿವಿ ಪ್ರಾಧ್ಯಾಪಕ ಡಾ.ಮೋಹನ್ ಸಿ.ಡಿ ಅವರಿಗೆ ಪ್ರೊ. ಉಮಕಾಂತ್ ಸಿನ್ಹಾ ಸ್ಮಾರಕ ಪ್ರಶಸ್ತಿ….

ಮೈಸೂರು,ಜ,6,2020(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯದ ಅಣುಜೀವ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮೋಹನ್ ಸಿ.ಡಿ ಅವರಿಗೆ ಪ್ರೊ. ಉಮಕಾಂತ್ ಸಿನ್ಹಾ ಸ್ಮಾರಕ ಪ್ರಶಸ್ತಿ ನೀಡಲಾಗಿದೆ.

ಡಾ. ಮೋಹನ್ ರವರು ಮೈಸೂರು ವಿಶ್ವ ವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ಅವರ ಮಾರ್ಗದರ್ಶನದಲ್ಲಿ  ಔಷಧೀಯ ಗುಣಲಕ್ಷಣಗಳನ್ನ ಹೊಂದಿರುವ ರಾಸಾಯನಿಕಗಳು ಕಂಡು ಹಿಡಿಯುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಪ್ರೊ. ರಂಗಪ್ಪ ಮತ್ತು ಅವರ ತಂಡ ಇತ್ತೀಚೆಗೆ ಸಂಶೋಧನೆ ಲೇಖನಗಳನ್ನ ಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದನ್ನು ನೆನೆಯಬಹುದು. ನಮ್ಮ ದೇಶದಲ್ಲಿ ಜೀವರಾಸಾಯನ ಶಾಸ್ತ್ರದ ಅತ್ಯುತ್ತಮ ಸಂಶೋಧನೆಗಳಲ್ಲಿ ತೊಡಗಿರುವ40 ವರ್ಷದೊಳಗಿನ  ವಿಜ್ಞಾನಿಗಳಿಗೆ ಈ ರಾಷ್ಟ್ರಮಟ್ಟದ ಪ್ರಶಸ್ತಿಯನ್ನ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆ ವತಿಯಿಂದ ನೀಡಲಾಗುತ್ತದೆ. ಈ ಪ್ರಶಸ್ತಿ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಪ್ರಾಪ್ತವಾಗಿರುವುದು ಹೆಮ್ಮೆಯ ವಿಷಯವೆಂದು ರಂಗಪ್ಪ ಅವರು ತಿಳಿಸಿದ್ದಾರೆ. ಡಾ. ಮೋಹನ್ ಅವರು ಇತ್ತೀಚೆಗೆ NASA-young ಸೈಂಟಿಸ್ಟ್ ಪ್ರಶಸ್ತಿಯನ್ನ ಪಡೆದಿದ್ದಾರೆ.

ಭಾರತದ ವಿಜ್ಞಾನ ಉತ್ತೇಜಿಸುವ ಉದ್ದೇಶದಿಂದ ISCA  ಅನ್ನು 1914ರಲ್ಲಿ ದೇಶದ ವಿಜ್ಞಾನ ಸಂಘವಾಗಿ ಉದ್ಘಾಟಿಸಲಾಗಿತ್ತು.  107ನೇ ISCA ವಾರ್ಷಿಕ ಸಭೆಯನ್ನ ಜನವರಿ 3 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಜಿ.ಕೆವಿಕೆ ಕ್ಯಾಂಪಸ್ ನ ಕೃಷಿ ವಿಜ್ಞಾನ ವಿಶ್ವ ವಿದ್ಯಾನಿಲಯದಲ್ಲಿ ಉದ್ಘಾಟಿಸಿದರು.

Key words: Prof. Dr. Mohan C.D- Professor – Mysore university-Umakant Sinha Memorial Award-prof. KS Rangappa