ಕಾಡಾನೆ ಸಮಸ್ಯೆ -ಬೆಳೆ ಪರಿಹಾರ; ಏಪ್ರಿಲ್ ನಂತರ ದೆಹಲಿಗೆ ನಿಯೋಗ- ಸಚಿವ ಕೆ.ಗೋಪಾಲಯ್ಯ ಭರವಸೆ

ಹಾಸನ,ಮಾರ್ಚ್,2021(www.justkannada.in):  ಸಕಲೇಶಪುರ-ಆಲೂರು ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ .ಮುಂದಿನ ಏಪ್ರಿಲ್ ನಂತರ ಸ್ಥಳೀಯ ಬೆಳೆಗಾರರು ಒಳಗೊಂಡ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಕ್ರಮವಹಿಸುವ ಕೆಲಸ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.jk

ಸಕಲೇಶಪುರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ , ಜಿಲ್ಲಾ ಪ್ಲಾಂಟರ್ ಸಂಘ, ಕಸಬಾ ಹೋಬಳಿ ಬೆಳೆಗಾರರ ಸಂಘದಿಂದ ಆಯೋಜಿಸಲಾಗಿದ್ದ ಕಾಫಿ ಕೃಷಿ ಮೇಳ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಗೋಪಾಲಯ್ಯ, ಕಾಡಾನೆ ಸಮಸ್ಯೆ, ಅರಣ್ಯ ಒತ್ತುವರಿ, ಗೊಬ್ಬರ ಸಮಸ್ಯೆ ಕುರಿತು ಸಭೆಯಲ್ಲಿ ನನ್ನ ಗಮನಕ್ಕೆ ತರಲಾಗಿದೆ ಸಕಲೇಶಪುರ ಕೊಡಗು ಗಡಿ ಭಾಗದಲ್ಲಿ ಅರಣ್ಯ ಒತ್ತುವರಿ ವಿಚಾರ ಹಲವಾರು ವರ್ಷದ ಸಮಸ್ಯೆಯಾಗಿದೆ‌..ಮಲೆನಾಡು ಭಾಗದ ಶಾಸಕರು ಸಹ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದಾರೆ‌‌.ಕೇರಳ ಮಾದರಿಯಲ್ಲಿ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.

ಗೊಬ್ಬರ ಸಮಸ್ಯೆಗೆ ಬೆಂಗಳೂರಿಗೆ ನಿಯೋಗ ಬಂದಾಗ ಕೇಂದ್ರ ರಾಸಾಯನಿಕ ಸಚಿವ ಸದಾನಂದಗೌಡ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಕಾಫಿ ಬೆಳೆಗಾರರು 25 ವರ್ಷದ ಹಿಂದೆ ಶ್ರೀಮಂತರು ಎಂಬ ಮಾತು ಪ್ರಚಲಿತವಾಗಿತ್ತು ಇಂದಿನ ಕಾಲಘಟ್ಟದಲ್ಲಿ ಇದು ಸುಳ್ಳಾಗುತ್ತಿದ್ದು ಅತೀವೃಷ್ಟಿ ಅಕಾಲಿಕ ಮಳೆ ಇದಕ್ಕೆ ಕಾರಣವಾಗಿದೆ..ಕಾಫಿ ಬೆಳೆಗಾರರ ಬ್ಯಾಂಕ್ ಸಾಲದ ಬಡ್ಡಿ ಮನ್ನಾ ವಿಚಾರವಾಗಿ ಸಿಎಂ ಗಮನಕ್ಕೆ ತರಲಾಗುವುದು ಎಂದು ಸಚಿವ ಗೋಪಾಲಯ್ಯ ಅಭಯ ನೀಡಿದರು.problem-wild-solution-delegation-delhi-minister-k-gopalaiah

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಮ್. ವಿಶ್ವನಾಥ್ , ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ , ಕಾರ್ಯದರ್ಶಿ ವಿಶ್ವನಾಥ್ ನಾಯಕ್, ಕೆ‌ಜಿ.ಎಫ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಸಿ.ಎಸ್.ಮಹೇಶ್, ಎಂ.ಎಚ್.ಪ್ರಕಾಶ್, ಕೆ.ಎನ್.ಸುಬ್ರಹ್ಮಣ್ಯ, ಕೃಷ್ಣ ಮೂರ್ತಿ ಖಂಡಗೆ ಇತರರು ಹಾಜರಿದ್ದರು.

Key words: problem – wild – solution – Delegation -Delhi =Minister =K Gopalaiah