ಕೊರೋನಾ ಚಿಕಿತ್ಸೆಗೆ 2500 ಬೆಡ್ ಗಳನ್ನ ನೀಡಲು ಖಾಸಗಿ ಆಸ್ಪತ್ರೆಗಳಿಂದ ಒಪ್ಪಿಗೆ…

ಬೆಂಗಳೂರು,ಜೂ,29,2020(www.justkannada.in): ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗೆ 2500 ಬೆಡ್ ಗಳನ್ನ ನೀಡಲು ಒಪ್ಪಿಗೆ ನೀಡಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ಸಂಬಂಧ ಇಂದು ಖಾಸಗಿ ಆಸ್ಪತ್ರೆಗಳ ಮಾಲೀಕರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಮಾತುಕತೆ ನಡೆಸಿದರು. ಈ ವೇಳೆ ಸಚಿವರು, ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ನಾಳೆಯೊಳಗೆ  2500 ಬೆಡ್ ಒದಗಿಸಬೇಕು. ಕೊರೋನಾ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರವನ್ನ ಪಾಲಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಖಾಸಗಿ ಆಸ್ಪತ್ರೆ ಮಾಲೀಕರಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆಗಳ ಮಾಲೀಕರು ಕೋವಿಡ್, ನಾನ್ ಕೋವಿಡ್  ಎಂದು ನಿಗದಿಪಡಿಸಿ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಷ್ಟ ಎಂದು ತಿಳಿಸಿದರು. ಈ ಬಗ್ಗೆ ಚರ್ಚಿಸಿ ನಾಳೆ ನಮ್ಮ ಅಭಿಪ್ರಾಯವನ್ನ ತಿಳಿಸುತ್ತೇವೆ ಎಂದು ಖಾಸಗಿ ಆಸ್ಪತ್ರೆ ಮಾಲೀಕರು ಹೇಳಿದ್ದರು.private-hospitals-agreed-provide-2500-beds-corona-treatment

ಇದಕ್ಕೆ ಉತ್ತರಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಇಂದೇ ಚರ್ಚಿಸಿ. ಈಗಲೇ ನಿಮ್ಮ ಅಭಿಪ್ರಾಯವನ್ನ ಹೇಳಲೇಬೇಕು. ನಾವು ಹೊರ ಹೋಗುತ್ತೇವೆ ಎಲ್ಲಾ ಮಾಲೀಕರು ಚರ್ಚಿಸಿ ನಿರ್ಧರಿಸಿ ಎಂದಿದ್ದರು. ಇದೀಗ ಕೋವಿಡ್ ಚಿಕಿತ್ಸೆಗೆ 2500 ಬೆಡ್ ಗಳನ್ನ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿವೆ. ಮೊದಲ ವಾರದಲ್ಲಿ 1500 ಬೆಡ್ ನಂತರ ಮುಂದಿನ ದಿನಗಳಲ್ಲಿ ಸಾವಿರ ಬೆಡ್ ಗಳನ್ನ ಹಸ್ತಾಂತರಿಸಲು ಖಾಸಗಿ ಆಸ್ಪತ್ರೆಗಳು ತೀರ್ಮಾನಿಸಿವೆ.

Key words: Private hospitals – agreed – provide- 2500 beds – corona treatment.