ಸಂವಿಧಾನದಲ್ಲಿ ಬುದ್ಧನ ತತ್ವಗಳನ್ನು ಅಳವಡಿಸಲಾಗಿದೆ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,14,2020(www.justkannada.in) : ಬೌದ್ಧ ಧರ್ಮವು ಕರುಣೆ, ಸೌಹಾರ್ದತೆ, ಅಹಿಂಸೆ, ಸಮಾನತೆ, ಸ್ವಾತಂತ್ರ್ಯ ಹೀಗೆ ಅನೇಕ ಮೌಲ್ಯಗಳನ್ನು ಒಳಗೊಂಡಿದೆ. ಈ ಎಲ್ಲಾ ಸತ್ಯಗಳ ಅರಿತ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬುದ್ಧನ ತತ್ವಗಳನ್ನು ಅಳವಡಿಸಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

principles,Buddha,incorporated,Constitution,Chancellor,Mysore Vivi,Prof.G.Hemant Kumar

ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘’64ನೇ ಧಮ್ಮ ದೀಕ್ಷಾ ದಿನಾಚರಣೆ’’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ  ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪ್ರೊ.ಜಿ.ಹೇಮಂತ್ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ, ಬುದ್ಧನ ತತ್ವಗಳನ್ನು ಅರಿತು ಬೌದ್ಧ ಧರ್ಮದ ದೀಕ್ಷೆ ಪಡೆದರು. ಆದರ್ಶ ಧರ್ಮವನ್ನು ಬುದ್ಧ ತತ್ವ ಹಾಗೂ ಬುದ್ಧ ಧರ್ಮದಲ್ಲಿ ಕಂಡುಕೊಂಡರು ಎಂದರು.principles,Buddha,incorporated,Constitution,Chancellor,Mysore Vivi,Prof.G.Hemant Kumar

ಪ್ರಜಾಸತ್ತಾತ್ಮಕ, ಸಮಾನತೆ, ಸಹೋದರತೆಯೇ ನಿಜವಾದ ಧರ್ಮ ಎಂದು ನಂಬಿ ನಡೆದರು. ತಮ್ಮ ಜೀವನದ ಕೊನೆಯ ಅವಧಿಯಲ್ಲಿ ಬುದ್ಧನ ಮೂಲ ತತ್ವಗಳನ್ನು ಅರಸುತ್ತಾ ಬುದ್ಧ ಮತ್ತು ದಮ್ಮ ಎಂಬ ಕೃತಿಯನ್ನು 1956ರಲ್ಲಿ ರಚಿಸಿದರು ಎಂದು ವಿವರಿಸಿದರು.

ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ ಮಾತನಾಡಿ,  ನಮ್ಮ ವೇದನೆ ಮತ್ತು ಸಂವೇದನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಸಮಾಜದ ವೇದನೆ, ಸಂವೇದನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ಸತ್ಯ ಅರಿತರೆ ನಾವು ಹೇಗೆ ಮಾತನಾಡಬೇಕು, ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ಕಂಡುಕೊಳ್ಳಹುದು. ಬೌದ್ಧ ಧರ್ಮದಲ್ಲಿ ಧ್ಯಾನದ ಮೂಲಕ ಇದನ್ನು ತಿಳಿಸಲಾಗುತ್ತದೆ ಎಂದರು.

ಬುದ್ಧ, ಮಹಾವೀರ, ಗಾಂಧಿ, ಅಂಬೇಡ್ಕರ್ ಹೀಗೆ ಅನೇಕ ಮಹಾನೀಯರು ಮನುಷ್ಯರಂತೆ ಬದುಕಿದವರಾದರೂ, ಅವರ ಆಲೋಚನೆಗಳು ಘನ ಉದ್ದೇಶಗಳನ್ನು ಹೊಂದಿದ್ದವು. ಹೀಗಾಗಿ, ಪ್ರತಿಯೊಬ್ಬರು ಅವರ ವಿಚಾರಧಾರೆಗಳನ್ನು, ಆಲೋಚನೆಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರ ವಿಚಾರಧಾರೆಗಳು ಮಾನವ ಪ್ರೇಮವನ್ನು ಹೆಚ್ಚು ಮಾಡುತ್ತದೆ. ಸಂವಿಧಾನದಲ್ಲಿ ಮನುಷ್ಯತ್ವ, ಜೀವಪ್ರೇಮವಿದೆ. ಆ ಕಾಲದಲ್ಲಿಯೇ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಎಲ್ಲಾ ಉತ್ತಮ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸುವ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.

ಧಾರ್ಮಿಕ ಚಿಂತನೆಗಳು ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅರಿವು ಅಂಬೇಡ್ಕರ್ ಅವರಿಗಿತ್ತು. ಹೀಗಾಗಿ, ವೈಜ್ಞಾನಿಕವಾದ ಗುಣಗಳನ್ನು ಹೊಂದಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಪ್ರಪಂಚದಲ್ಲಿಯೇ ವೈಜ್ಞಾನಿಕವಾಗಿ ಬೆಳೆಯುತ್ತಿರುವ ಧರ್ಮ ಬೌದ್ಧ ಧರ್ಮವಾಗಿದೆ ಎಂದು ತಿಳಿಸಿದರು.

ಬೌದ್ಧ ವಿದ್ವಾಂಸ ಥುಬ್ ಟೆನ್ ಕಾಲ್ಡೆನ್ ಬುದ್ಧ ಮತ್ತು ಆತನ ಧಮ್ಮ ವಿಷಯ ಕುರಿತು ಉಪನ್ಯಾಸ ನೀಡಿದರು.principles,Buddha,incorporated,Constitution,Chancellor,Mysore Vivi,Prof.G.Hemant Kumar

ಕಾರ್ಯಕ್ರಮದಲ್ಲಿ ಕೇಂದ್ರ ಟಿಬೆಟಿಯನ್ ಆಡಳಿತ(ದಕ್ಷಿಣ ವಲಯ) ಪ್ರಧಾನ ಪ್ರತಿನಿಧಿ ಚೋಫೆಲ್ ಥುಪ್ ಟೆನ್, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರು ಭಾಗವಹಿಸಿದ್ದರು.

key words : principles-Buddha-incorporated-Constitution-Chancellor-Mysore Vivi-Prof.G.Hemant Kumar