“ಪ್ರಧಾನಿ‌ ನರೇಂದ್ರ ಮೋದಿಯವರು ರವೀಂದ್ರ ನಾಥ್ ಠಾಗೋರ್ ರೀತಿ ಕಾಣಬೇಕಂತೆ”: ಪ್ರೊ.ಮಹೇಶ್ ಚಂದ್ರ ಗುರು ಟೀಕೆ

ಮೈಸೂರು,ಫೆಬ್ರವರಿ,23,2021(www.justkannada.in) : ರವೀಂದ್ರ ನಾಥ್ ಠಾಗೋರ್ ಎಂದೂ ಹಿಂದುತ್ವದ ಪ್ರತಿಪಾದಕರಾಗಿರಲಿಲ್ಲ. ಆದರೆ, ಇಂದು ಠಾಗೋರ್ ಹೆಸರಿನಲ್ಲಿ ಮೋದಿ ಬಂಗಾಳದ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಶ್ರೇಷ್ಠವಾದ ರಾಷ್ಟ್ರಗೀತೆ ಬರೆದ ಠಾಗೋರ್ ಹಾಗೂ ಕಾರ್ಪೊರೇಟ್ ವಲಯದ ವಕ್ತಾರ ಮೋದಿಗೂ ತಾಳೆಯಾಗಲ್ಲ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಟೀಕಿಸಿದ್ದಾರೆ.

jk

ಮೈಸೂರು ಪತ್ರಕರ್ತರ ಭವನದಲ್ಲಿ ಪ್ರೊ.ಮಹೇಶ್ ಚಂದ್ರ ಗುರು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾಗೆ ಡ್ರೆಸ್ ಕಾನ್ಸಿಯಸ್ ಇರುವಷ್ಟು ಡ್ಯೂಟಿ‌ ಕಾನ್ಸಿಯನ್ಸ್ ಇಲ್ಲ

ಪ್ರಧಾನಿ ಮೋದಿ, ಅಮಿತ್ ಶಾ, ಮಂತ್ರಿಗಳು ಮತ್ತು ರಾಜ್ಯದ ಮಂತ್ರಿಗಳಿಗೆ ಡ್ರೆಸ್ ಕಾನ್ಸಿಯಸ್ ಇರುವಷ್ಟು ಡ್ಯೂಟಿ‌ ಕಾನ್ಸಿಯನ್ಸ್ ಇಲ್ಲ. ಪ್ರಧಾನಿ‌ ನರೇಂದ್ರ ಮೋದಿಯವರು ರವೀಂದ್ರ ನಾಥ್ ಠಾಗೋರ್ ರೀತಿ ಕಾಣಬೇಕಂತೆ. ಮೋದಿ ಎಲ್ಲಿ, ರವೀಂದ್ರನಾಥ್ ಟಾಗೂರ್ ಎಲ್ಲಿ..! ಎಂದು ಕಿಡಿಕಾರಿದ್ದಾರೆ.

ಮೋದಿಯವರು ಶಾಂತಿ‌ ನಿಖಾಲ್, ಸಮಾನತೆ ನಿಖಾಲ್, ಸ್ವಾತಂತ್ರ್ಯ ನಿಖಾಲ್

ರವೀಂದ್ರ ನಾಥ್ ಠಾಗೋರ್ ಅವರು ರಾಷ್ಟ್ರ ಗೀತೆಯಲ್ಲಿ ನಾವೆಲ್ಲರೂ ಒಂದೆ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದಿದ್ದಾರೆ. ಠಾಗೋರ್ ಅವರು ಶಾಂತಿನಿಕೇತನ ಕಟ್ಟಿಕೊಟ್ಟರು. ಆದರೆ, ಮೋದಿಯವರು ಶಾಂತಿ‌ ನಿಖಾಲ್, ಸಮಾನತೆ ನಿಖಾಲ್, ಸ್ವಾತಂತ್ರ್ಯ ನಿಖಾಲ್, ರೈತರ ಭೂಮಿ ನಿಖಾಲ್, ಮಹಿಳೆರ ಮಾನ ನಿಖಾಲ್, ಕಾರ್ಮಿಕರ ಉದ್ಯೋಗ ನಿಖಾಲ್, ವಿದ್ಯಾರ್ಥಿಗಳ ಮತ್ತು ಯುವಜನರ ಭವಿಷ್ಯ ನಿಖಾಲ್ ಮಾಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಮಾರ್ವಾಡಿಗಳು ದೇವರನ್ನೇ ಮಾರಾಟ ಮಾಡ್ತಿದ್ದಾರೆ

ಇಂದು ಸಕಾಲ್ ಯಾರಿಗೆಂದರೆ ವೈದಿಕರು ಮತ್ತು ಕಾರ್ಪೊರೇಟ್ ವಲಯಕ್ಕೆ ಮಾತ್ರ. ಅಮಿತ್ ಶಾ ಹೇಳುತ್ತಾರೆ. ನಾನು ಸರ್ದಾರ್ ಪಟೇಲ್ ಕಾ ಲೀಗಲ್ ಹೇರ್ ಎಂದು ಹೇಳುತ್ತಾರೆ. ಅಮಿತ್ ಶಾ ಎಲ್ಲಿ ಸರ್ದಾರ್ ಪಟೇಲ್ ಎಲ್ಲಿ. ಈ ಮಾರ್ವಾಡಿಗಳು ದೇವರನ್ನೇ ಮಾರಾಟ ಮಾಡುತ್ತಿದ್ದಾರೆ.

ಮೂರನೇ ದರ್ಜೆಯ ಸಿನಿಮಾ ತಾರೆಯನ್ನ ಮಾನವ ಸಂಪನ್ಮೂಲ ಇಲಾಖೆ ಮಂತ್ರಿ

ಮೂರನೇ ದರ್ಜೆಯ ಸಿನಿಮಾ ತಾರೆಯನ್ನ ಮಾನವ ಸಂಪನ್ಮೂಲ ಇಲಾಖೆ ಮಂತ್ರಿ ಮಾಡುತ್ತಾರೆ. ಡಿಸ್ಕೊ ತೆಕ್, ಬ್ರೇಕ್ ಡ್ಯಾನ್ಸ್, ರಾಕ್ ಡ್ಯಾನ್ಸ್ ಮಾಡಿಕೊಂಡಿದ್ದ ಸ್ಮೃತಿ ಇರಾನಿಯನ್ನು ಇಂದು ಮಾನವಸಂಪನ್ಮೂಲ ಇಲಾಖೆ ಮಂತ್ರಿ‌ ಮಾಡುತ್ತಾರೆ. ಅವರಿಗೆ ಮಾನವ, ಸಂಪನ್ಮೂಲ ಅಂದರೆ ಗೊತ್ತಿಲ್ಲ. ಅಭಿವೃದ್ಧಿ ಬೇಕಾಗಿಲ್ಲ. ಇದು ದೇಶದ ದುರಂತ ಎಂದು ಅಸಮಾಧಾನವ್ಯಕ್ತಪಡಿಸಿದರು.

ಬಟ್ಟೆ ಅಂಗಡಿಯಲ್ಲಿ ಸೀರೆ ಮಾರುತ್ತಿದ್ದ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆ

ವಿತ್ತ ಮಂತ್ರಿ ಸಹೋದರಿ ನಿರ್ಮಲಾ ಸೀತಾರಾಮನ್ ಬಟ್ಟೆ ಅಂಗಡಿಯಲ್ಲಿ ಸೀರೆ ಮಾರುತ್ತಿದ್ದರು. ಇಂತಹವರನ್ನು ವಿತ್ತ ಸಚಿವೆಯನ್ನಾಗಿ ಮಾಡಿದ್ದೀರಲ್ಲ ಇಂತಹವರಿಂದ ಯಾವ ಆರ್ಥಿಕ ನೀತಿ ರೂಪಿಸಲು ಸಾಧ್ಯ. ನಾವು ನಾಯಕರಿಂದ ಆಳಲ್ಪಡುತ್ತಿಲ್ಲ,  ಲೂಠಿಕೋರರಿಂದ ಆಳಲ್ಪಡುತ್ತಿದ್ದೇವೆ. ಇಂತಹವರ ಕೈಯಲ್ಲಿ ಸಂವಿಧಾನ ಮತ್ತು  ಸರ್ಕಾರವನ್ನು ಕೊಟ್ಟಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸುರೇಶ್ ಕುಮಾರ್ ಒಬ್ಬ ಹುಟ್ಟು ಮನುವಾದಿ

 Prime Minister-Narendra Modi-Ravindra Nath Tagore-Like-seen-Prof.Mahesh Chandra Guru  

ಬೌದ್ಧ ಮತ್ತು ಜೈನ ಧರ್ಮ ಕುರಿತ ವಿಷಯವನ್ನ ಪಠ್ಯದಿಂದ ಕೈಬಿಡುವ ವಿಚಾರ ಮಾತನಾಡಿ, ಡಿಸಿಎಂ ಅಶ್ವಥ್ ನಾರಾಯಣ್ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಪ್ರೊ.ಮಹೇಶ್ ಚಂದ್ರ ಗುರು ಕಿಡಿಕಾರಿದರು.

ಬುದ್ಧ, ಮಹಾವೀರರ ವಿಚಾರಗಳನ್ನು ಪಠ್ಯದಿಂದ ತೆಗೆಯಲು ಹೊರಟಿದ್ದೀರಿ. ನಿಮಗೆ ಸಾವರ್ಕರ್ ವಿಚಾರ ಬೇಕಾ?, ಸ್ವಾತಂತ್ರ್ಯ ಸಮರದಲ್ಲಿ ದೇಶ ವಿರೋಧಿಗಳಾಗಿ ಬ್ರಿಟಿಷರೊಂದಿಗೆ ಶಾಮೀಲಾಗಿ ಚಮಚಾಗಿರಿ ಭತ್ಯ ಸ್ವೀಕಾರ ಮಾಡಿದವರ ಕಥೆಗಳು ಬೇಕಾ?, ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ಹುಟ್ಟು ಮನುವಾದಿ ಎಂದು ಕಿಡಿಕಾರಿದ್ದಾರೆ.

ಇಂದು ಶಿಕ್ಷಣ ಕೇಸರೀಕರಣ ಮತ್ತು ಖಾಸಗೀಕರಣವಾಗುತ್ತಿದೆ

ಇನ್ನೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರಿಗಾದರೂ ಬುದ್ದಿ ಇಲ್ಲವಾ?, ಅಶ್ವಥ್ ನಾರಾಯಣ್ ಉನ್ನತ ಶಿಕ್ಷಣ ಸಚಿವರಾಗಲು ಅನ್ ಫಿಟ್. ಮಹಾ ಮೂರ್ಖನ ಕೈಯಲ್ಲಿ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಾಗೆಯೇ, ಮನುವಾದಿ ಸುರೇಶ್ ಕುಮಾರ್ ಕೈಯಲ್ಲಿ ಶಿಕ್ಷಣ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಾಗಾಗಿ, ಇಂದು ಶಿಕ್ಷಣ ಕೇಸರೀಕರಣ ಮತ್ತು ಖಾಸಗೀಕರಣವಾಗುತ್ತಿದೆ. ಇಂತಹ ಮುಟ್ಟಾಳರು ಶಿಕ್ಷಣ ಸಚಿವರಾಗಿ ಮುಂದುರೆಯುವುದು ಸೂಕ್ತವಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : Prime Minister-Narendra Modi-Ravindra Nath Tagore-Like-seen-
Prof.Mahesh Chandra Guru