‘ನಿಮ್ಮ ಜಿಲ್ಲೆಗಳು ಕೊರೋನಾ ಗೆದ್ದರೇ ದೇಶ ಗೆದ್ಧಂತೆ’: ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಕೊಟ್ಟ ಸಲಹೆಗಳೇನು ಗೊತ್ತೆ…?

kannada t-shirts

ನವದೆಹಲಿ,ಮೇ,18,2021(www.justkannada.in):  ನಿಮ್ಮ ಜಿಲ್ಲೆಗಳು ಕೊರೋನಾ ಗೆದ್ದರೆ ದೇಶ ಗೆದ್ಧಂತೆ. ಫೀಲ್ಡ್ ಕಮಾಂಡರ್ ನಂತೆ ಇಡೀ ಜಿಲ್ಲೆಯ ಸಶಕ್ತೀಕರಣ ಮಾಡಿ. ನನ್ನ ಗ್ರಾಮವನ್ನು ಕೊರೋನಾ ಮುಕ್ತ ಮಾಡುತ್ತೇನೆ ಎಂದು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.jk

ಕೊರೋನಾ ನಿರ್ವಹಣೆ , ಸ್ಥಿತಿಗತಿಗಳ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ, ಹಲವು ರಾಜ್ಯಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು. ಸಭೆಯಲ್ಲಿ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಎಂ ಬಿಎಸ್ ಯಡಿಯೂರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಪಾಲ್ಗೊಂಡಿದ್ದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಪಕ್ಷ ಬೇಧ ಮರೆತು ಕೊರೊನಾ ವಿರುದ್ಧ ಎಲ್ಲರೂ ಒಂದಾಗಿ. ಕೊರೊನಾದಿಂದ ಕುಟಂಬಸ್ಥರನ್ನು ಭೇಟಿ ಮಾಡದಂತೆ ಆಗಿದೆ. ಎಲ್ಲಾ ಡಿಸಿಗಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ.  ಅವರಿಗೆ ಕೊರೋನಾ ಬಂದ್ರೂ ಕೆಲಸ ಮಾಡ್ತಿದ್ದಾರೆ. ನಿಮ್ಮ ಎಲ್ಲಾ ಪ್ರಯತ್ನ ಶ್ಲಾಘಿಸುತ್ತೇನೆ. ನಿಮ್ಮ ಜಿಲ್ಲೆಯ ಸವಾಲುಗಳನ್ನ ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಸಲಹೆ ಅಭಿಪ್ರಾಯವನ್ನ ಲಿಖಿತವಾಗಿ ತಿಳಿಸಿ. ನಿಮ್ಮ ಜಿಲ್ಲೆ ಕೊರೋನಾದಿಂದ ಗೆದ್ದರೇ ದೇಶ ಗೆದ್ದಂತೆ. ನನ್ನ ಗ್ರಾಮವನ್ನ ಕೊರೋನಾ ಮುಕ್ತವನ್ನಾಗಿ ಮಾಡುತ್ತೇನೆ ಎಂದು ದೇಶದ ಗ್ರಾಮಗಳ ಜನರೇ ಸಂಕಲ್ಪ ತೆಗೆದುಕೊಳ್ಳಿ ಎಂದು ಕರೆ ನೀಡಿದರು.

ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಕ್ ಡೌನ್ ಇಲ್ಲ.  ಭೌತಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೀರಿ. ಇದು ಗ್ರಾಮಗಳ ಶಕ್ತಿಯಾಗಿದೆ.  ನಮ್ಮ ಅಸ್ತ್ರ ಲೋಕಲ್ ಕಂಟೇನ್ಮೆಂಟ್ ಜೋನ್, ಫೀಲ್ಡ್ ಕಮಾಂಡರ್ ನಂತೆ ಇಡೀ ಜಿಲ್ಲೆಯನ್ನು ಸಶಸಕ್ತೀರಣ ಮಾಡಿ. ಕಾಳಸಂತೆಯಲ್ಲಿ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡಿಸಿಗಳಿಗೆ ಸಲಹೆ ನೀಡಿದರು.

ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗುತ್ತಿದೆ. ಕೊರೊನಾ ತುತ್ತತುದಿ ತಲುಪಿ ಈಗ ಕಡಿಮೆಯಾಗುತ್ತಿದೆ. ದೇಶದಲ್ಲಿ ಕೆಲವೆಡ ಕೊರನಾ ಕಡಿಮೆಯಾಗುತ್ತಿದ, ಕೊರನಾ ಕಡಿಮೆಯಾಗುತ್ತಿದೆಯಾದರೂ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.prime-minister-narendra-modi-advice-dcs-covid-control

ಪಿಎಂ ಕೇರ್ಸ್ ಫಂಡ್ ನಿಂದ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ. ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗುವುದು. ಲಸಿಕೆ ನೀಡಿಕೆ ದಿನಾಂಕ 15 ದಿನಗಳ ಮುಂಚಿತವಾಗಿ ತಿಳಿಸಿ. ಕೋವಿಡ್ ಲಸಿಕೆ ಪೋಲಾಗದಂತೆ ಕ್ರಮ ವಹಿಸಿ ಎಂದು ರಾಜ್ಯಗಳಿಗೆ ಪ್ರಧಾನಿ ಮೋದಿ ಸೂಚಿಸಿದರು.

ENGLISH SUMMARY…

‘If we win the fight against Corona, it’s like winning the country’: PM Narendra Modi’s suggestions to DCs
New Delhi, May 18, 2021 (www.justkannada.in): “If your districts win the fight against Corona, it is like a big win for the entire country. I request you to work as a field commander and empower your districts. Pledge to make the villages that come under your respective districts free of Coronavirus,” suggested Prime Minister Narendra Modi.prime-minister-narendra-modi-advice-dcs-covid-control
He held a meeting with the Deputy Commissioners of the districts where the COVID-19 Pandemic is spreading swiftly. He interacted with the officers and collected information. Deputy Commissioners of 17 districts of Karnataka took part in the meeting, along with the Chief Minister B.S. Yedyurappa and BBMP Commissioner Gourav Gupta
The Prime Minister requested all the leaders of all the parties to join hands with the government in its fight against the pandemic. He appreciated the efforts made by all the officials in controlling the pandemic and asked them to write to him about their problems and challenges. He also asked the villagers to pledge to make their villages free of the pandemic.
On the occasion, he also informed that oxygen plants would be established in every district in the country and requested the officials concerned to announce the date of availability of vaccines to the people at least 15 days early.
Keywords: Prime Minister Narendra Modi/ virtual meeting/ Deputy Commissioners/ 17 Districts/ Karnataka/ Govt. of India/ control corona in rural areas

Key words: Prime Minister-narendra Modi- advice – DCs-covid control

website developers in mysore