ಮುಂದಿನ 4-5 ವರ್ಷಗಳಲ್ಲಿ ಗ್ಯಾಸ್ ಪೈಪ್ ಲೈನ್ ಸಂಪರ್ಕದ ಗುರಿ: ದೇಶದ ಇಂಧನ ಕ್ಷೇತ್ರ ಹಾಡಿ ಹೊಗಳಿದ ಪ್ರಧಾನಿ ಮೋದಿ.

ಬೆಂಗಳೂರು,ಫೆಬ್ರವರಿ,6,2023(www.justkannada.in): ಒನ್ ನೇಷನ್ ಒನ್ ಗ್ರಿಡ್ ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದೆ. ಮುಂದಿನ 4-5 ವರ್ಷಗಳಲ್ಲಿ ಗ್ಯಾಸ್ ಪೈಪ್ ಲೈನ್ ಸಂಪರ್ಕದ ಗುರಿ ಹೊಂದಲಾಗಿದೆ. 35 ಸಾವಿರ ಕಿಮೀ ಗ್ಯಾಸ್ ಪೈಪ್ ಲೈನ್ ಸಂಪರ್ಕ  ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಬೆಂಗಳೂರಿನ ಮಾದಾವರ ಬಳಿಯ  ಬಿಐಇಸಿಯಲ್ಲಿ ಇಂಧನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ದಿಯಲ್ಲಿ ಇಂಧನ ಕ್ಷೇತ್ರದ  ಪಾತ್ರ ಬಹಳ ಮುಖ್ಯ. ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶ ಸಿಕ್ಕಿದೆ. ಅಭಿವೃದ್ಧಿ ಸಂಕಲ್ಪದಲ್ಲಿ ನಡೆಯುತ್ತಿರುವ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ.  2022ರಲ್ಲಿ ಜಗತ್ತಿನಲ್ಲಿ ಏನೇ ಸಮಸ್ಯೆಗಳಿದ್ದರೂ ನಾವು ಪಾರಾಗಿದ್ದೇವೆ. ಸಾಮಾನ್ಯ ಜನರ ಮಧ್ಯಮವರ್ಗದವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಳೆದ 9 ವರ್ಷಗಳಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ. ಶೇ.13 ರಷ್ಟು ಇಂಟರ್ ನೆಟ್ ಬಳಕೆದಾರರ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಇಂಟರ್ ನೆಟ್ ಬಳಸಲಾಗುತ್ತಿದೆ. ಮೊಬೈಲ್ ಫೋನ್ ಬಳಸುವ ದೊಡ್ಡ ದೇಶವಾಗಿದೆ.   ಅಭಿವೃದ್ದಿ ವೇಗ ನೋಡಿದರೇ ಹೊಸನಗರಗಳ ಉದಯವಾಗಲಿದೆ ಎಂದು ನುಡಿದರು.

ಭಾರತದಲ್ಲಿ ಇಂಧನ ಬಳಕೆ ಹೆಚ್ಚಾಗುತ್ತಲೇ ಇದೆ.  ಭಾರತದಲ್ಲಿ ಹೂಡಿಕೆ ಮತ್ತು ಸಹಯೋಗ ಹೆಚ್ಚಿಸಬೇಕಿದೆ.  ಇಂಧನ ಪೂರೈಕೆಯಲ್ಲಿ ಮತ್ತಷ್ಟು ಕ್ರಮ  ಅಗತ್ಯ.  ಸ್ಥಳೀಯವಾಗಿ ಇಂಧನ ಸೃಷ್ಠಿ ಹೆಚ್ಚಿಸುವ ಅನಿವಾರ್ಯತೆ ಇದೆ. ಭಾರತದಲ್ಲಿ ಗ್ಯಾಸ್ ಬೇಡಿಕೆ ಶೇ.500 ರಷ್ಟು ಹೆಚ್ಚುವ ಸಾಧ್ಯತೆ ಇದೆ. ಸಾಮಾಜಿಕವಾಗಿ ಆರ್ಥಿಕವಾಗಿ ಭಾರತ ವೇಗವಾಗಿ ಬೆಳೆಯುತ್ತಿದೆ. ಹೊರಗಿನ ಪರಿಸ್ಥಿತಿ ಏನೇ ಇರಲಿ. ಅಂತರಿಕವಾಗಿ ಭಾರತ ಸದೃಢವಾಗಿದೆ. ತಳಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಪ್ರಭಲತೆ ದೇಶವನ್ನ ಸುಭ್ರದ್ರವಾಗಿಟ್ಟಿದೆ. ಪರ್ಯಾಯ ಇಂಧನ ವ್ಯವಸ್ಥೆಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಇಲೆಕ್ಟ್ರಿಕ್ ವಾಹನ ಜೈವಿಕ ಇಂಧನ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Key words: Prime Minister- Modi -praised -country’s- energy -sector