ಸೆ.17 ರಂದು ಪ್ರಧಾನಿ ಮೋದಿ ಜನ್ಮದಿನಾಚಾರಣೆ ಹಿನ್ನೆಲೆ: ‘ಮೋದಿ ಯುಗ್ ಉತ್ಸವ್’ ಆಚರಣೆಗೆ ನಿರ್ಧಾರ.

ಮೈಸೂರು,ಸೆಪ್ಟಂಬರ್,11,2021(www.justkannada.in):  ಸೆಪ್ಟೆಂಬರ್‌ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಜನ್ಮದಿನಾಚರಣೆ ಹಿನ್ನೆಲೆ, ಈ ಅಂಗವಾಗಿ ಮೋದಿ ಯುಗ್ ಉತ್ಸವ್ ಆಚರಣೆಗೆ ನಿರ್ಧಾರ ಮಾಡಲಾಗಿದೆ ಎಂದು ಮೈಸೂರು ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್ ಎ ರಾಮದಾಸ್ , ಪ್ರಧಾನಿ ಮೋದಿ ಜನ್ಮದಿನಾಚಾರಣೆ ಅಂಗವಾಗಿ ಮೈಸೂರಿನ ಕೆ ಆರ್ ಕ್ಷೇತ್ರದ ಬಿಜೆಪಿ ಘಟಕದಿಂದ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. 2021 ರ ಸೆಪ್ಟೆಂಬರ್ 17ರಿಂದ 2022 ರ ಸೆಪ್ಟೆಂಬರ್ 17ರವರೆಗೂ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಜೊತೆಗೆ ಅವರು ಗುಜರಾತಿನ ಮುಖ್ಯಮಂತ್ರಿ ಆಗಿ 20 ವರ್ಷಗಳಾಗುವ ಹಿನ್ನೆಲೆಯಲ್ಲಿ ‘ಮೋದಿ @71  ಆಜಾದ್ ಭಾರತ್ @75  ಸ್ವರ್ಣ ಕೆ ಆರ್’ ಎಂಬ 20 ದಿನಗಳ ಕಾಲ ಕಾರ್ಯಕ್ರಮ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳು ಭಾಗಿಯಾಗಲಿದ್ದಾರೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

ಅಕ್ಟೋಬರ್ 17ರಂದು ಮೋದಿ ಯುಗ್ ಉತ್ಸವ್ ವಸ್ತಪ್ರದರ್ಶನ ಉದ್ಘಾಟನೆ ಆಗಲಿದೆ. ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಪ್ರಮುಖರು ಭಾಗಿಯಾಗಲಿದ್ದಾರೆ. ಬರುವ ಅಕ್ಟೋಬರ್ 6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾಗಿಯಾಗಲಿದ್ದಾರೆ ಎಂದು ಶಾಸಕ ಎಸ್.ಎ ರಾಮದಾಸ್  ಮಾಹಿತಿ ನೀಡಿದರು.

PM Modi’s birthday on Sept. 17: Decision to celebrate as ‘Modi Yug Utsav’
Mysuru, September 11, 2021 (www.justkannada.in): “Prime Minister will turn 71 on September 17. We have decided to celebrate the occasion as ‘Modi Yug Utsav,” informed K.R. Constituency MLA S.A. Ramdas.
He addressed a press meet at a private hotel in Mysuru today. He informed that the K.R. Constituency BJP unit has organized several programs from September 17, 2021, to September 17, 2022. “It is also 20 years since Narendra Modi became the Chief Minister of Gujarat. Hence, we have planned to celebrate the occasion as ‘Modi @71 Azad Bharat @ 75, Swarna K.R.,’ a 20-day duration program. Several Union and State Ministers will take part in these programs,” he explained.
The ‘Modi Yug Utsav’ will be inaugurated on September 17. Former Chief Minister B.S. Yedyurappa, Mysuru District In-charge Minister S.T. Somashekar, MP Pratap Simha, and other leaders will take part in the program. The valedictory of the program will be held on October 6 and Chief Minister Basavaraj Bommai will participate, he said.
Keywords: Modi Yug Utsav/ PM Modi Birthday/ September 17/ KR MLA S.A. Ramdas

Key words: Prime Minister –Modi- Birthday -Celebrations – Modi Yug Utsav-mysore-MLA-SA ramadas