ಸಂಪುಟ ವಿಸ್ತರಣೆ ಕುರಿತು ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸುವಂತೆ ಪ್ರಧಾನಿ ಸೂಚನೆ : ಸಿಎಂ ಬಿ.ಎಸ್.ವೈ

kannada t-shirts

ಬೆಂಗಳೂರು,ಸೆಪ್ಟೆಂಬರ್,18,2020(www.justkannada.in) : ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚಿಸಿದ್ದು, ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸುವಂತೆ ಸೂಚಿಸಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

jk-logo-justkannada-logo

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದ ಅಭಿವೃದ್ದಿ ವಿಚಾರಗಳ ಬಗ್ಗ್ಗೆ ಪ್ರಧಾನಿ ಚರ್ಚಿಸಿದ್ದು, ಕೊವಿಡ್ ಹಿನ್ನೆಲೆಯಲ್ಲಿ ಎಚ್ಚರಿಯಿಂದ ಇರಲು ತಿಳಿಸಿದ್ದಾರೆ ಎಂದು ಹೇಳಿದರು.Prime Minister-instructs-JP Nadda-discuss-volume-expansion-B.S.Y.

ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ಚರ್ಚಿಸಲು ಸೂಚಿಸಿದ್ದು, ಹೀಗಾಗಿ ಸಂಜೆ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ಸಮಾಲೋಚನೆ ನಡೆಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

 

key words : Prime Minister-instructs-JP Nadda-discuss-volume-expansion-B.S.Y.

website developers in mysore