ಜನರಿಗೆ ಮತ್ತೆ ಬೆಲೆ ಏರಿಕೆ ಬಿಸಿ:  ಪ್ರತಿ ಲೀಟರ್ ಹಾಲು, ಮೊಸರಿನ ದರ  3.ರೂ ಏರಿಕೆ.

ಬೆಂಗಳೂರು,ನವೆಂಬರ್,14,2022(www.justkannada.in): ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಇದೀಗ ಸರ್ಕಾರ ಮತ್ತೊಂದು ಬೆಲೆ ಏರಿಕೆಯ ಬಿಸಿ ನೀಡಿದೆ.

ಹೌದು ಪ್ರತಿ ಲೀಟರ್  ಹಾಲು, ಮೊಸರಿನ ದರ  3.ರೂ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇನ್ಮುಂದೆ ಜನರ ಜೇಬು ಸುಡಲಿದೆ.  ಟೋನ್ಡ್ ಹಾಲಿನ ದರ ಲೀಟರ್ ಗೆ 37 ರೂ.ನಿಂದ 40 ರೂಗೆ,  ಸ್ಪೆಷಲ್ ಹಾಲು  43ರೂ. ನಿಂದ 46  ರೂ.ಗೆ  ಸಮೃದ್ದಿ ಹಾಲಿನ ದರ ಲೀಟರ್ ಗೆ  48ರಿಂದ 51 ರೂ.ಗೆ ಏರಿಕೆ ಮಾಡಲಾಗಿದೆ.

ಸಂತೃಪ್ತಿ ಹಾಲಿನ ದರ 50 ರೂ,ನಿಂದ 53 ರೂಗೆ ಏರಿಕೆ ಮಾಡಲಾಗಿದೆ.  ಮೊಸರಿನ ದರ ಕೆಜಿಗೆ 45ರೂ. ನಿಂದ 48 ರೂ.ಗೆ ಏರಿಕೆ ಮಾಡಲಾಗಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎನ್ನಲಾಗುತ್ತಿದೆ. ಈ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿದ್ದು, ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Key words:  price -milk – curd – increased – Rs.3 per- liter.