ಫೋಟೊ ಶೂಟ್ ವೇಳೆ ತೆಪ್ಪದಿಂದ ಬಿದ್ದು ಪ್ರೇಮಿಗಳ ಸಾವು ಪ್ರಕರಣ: ನೀರಾವರಿ ಇಲಾಖೆಗೆ ಪತ್ರ ಬರೆಯಲು ಮುಂದಾದ ಮೈಸೂರು ಎಸ್ಪಿ ರಿಷ್ಯಂತ್…

ಮೈಸೂರು,ನವೆಂಬರ್,11,2020(www.justkannada.in):  ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮುಡುಕುತೊರೆ ಬಳಿ ಫೋಟೊ ಶೂಟ್ ನಡೆಸುವ ವೇಳೆ ತೆಪ್ಪ ಮಗುಚಿ ಪ್ರೇಮಿಗಳಿಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಚ್ಚೆತ್ತಿರುವ ಪೊಲೀಸ್ ಇಲಾಖೆ ನದಿ ಬಳಿ ಬರುವವರ ಮೇಲೆ ನಿಗಾ ವಹಿಸಲು ನೀರಾವರಿ ಇಲಾಖೆಗೆ ಪತ್ರ ಬರೆಯಲು ಮುಂದಾಗಿದೆ.kannada-journalist-media-fourth-estate-under-loss

ಈ ಕುರಿತು ಮಾತನಾಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನದಿ ಬಳಿ ಬರುವವರ ಮೇಲೆ ನಿಗಾ ವಹಿಸಲು ನೀರಾವರಿ ಇಲಾಖೆಗೆ ತಕ್ಷಣದಲ್ಲೇ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕನಿಷ್ಠ ಮುಂಜಾಗ್ರತೆಯನ್ನೂ ವಹಿಸದೆ ಜೋಡಿ ಸಾಹಸಕ್ಕೆ ಕೈಹಾಕಿದ್ದು,ತೆಪ್ಪ ನಡೆಸುವವರ ಮೇಲೆ ನಿಗಾ ಇಡಲು ಪೊಲೀಸರ ನಿರ್ಧಾರ ಮಾಡಿದ್ದಾರೆ.

ತಿ.ನರಸೀಪು ತಾಲೂಕಿನ ಮುಡುಕುತೊರೆ ಬಳಿ ಫೋಟೋಶೂಟ್​ ನಡೆಸುವ ಸಂದರ್ಭ ತೆಪ್ಪ ಮಗುಚಿ ಮದುವೆಗೂ ಮುನ್ನವೇ ವಧು-ವರ ಧಾರುಣ ಸಾವನ್ನಪ್ಪಿದ್ದರು. ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು(28), ಶಶಿಕಲಾ(20) ಮೃತ ದುರ್ದೈವಿಗಳು. ನ.22ರಂದು ಚಂದ್ರು, ಶಶಿಕಲಾ ಮದುವೆ ನಿಶ್ಚಯವಾಗಿತ್ತು.ಪ್ರೀ ವೆಡ್ಡಿಂಗ್​ ಫೋಟೋಶೂಟ್ ಮಾಡಿಸಲು ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರಿಗೆ ಮತ್ತೊಂದು ತೆಪ್ಪ. ಹೀಗೆ ಎರಡು ತೆಪ್ಪದಲ್ಲಿ ಹೋಗಿದ್ದರು.prewedding-lover-photo-shoot-death-mysore-sp-rishyant-letter-irrigation-department

ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಪೋಸ್​ ಕೊಡುವ ಸಂದರ್ಭ ತೆಪ್ಪ ಮಗುಚಿ ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

Key words: prewedding-lover- photo shoot-death-  Mysore SP- Rishyant, – letter – Irrigation Department.