ರೈತರ ಶೋಷಣೆ ತಪ್ಪಿಸುವ ಕಾಯ್ದೆ :  ವಿಧಾನಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸಮರ್ಥನೆ

ಬೆಂಗಳೂರು,ಸೆಪ್ಟೆಂಬರ್,26,2020(www.justkannada.in) : ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿಗೆ ಅಥವಾ ಖಾಸಗಿ ಅವರಿಗಾದರೂ ಮಾರಬಹುದು ಎರಡೂ ಕಡೆಗಳಲ್ಲಿ ಅವರಿಗೆ ಮಾರಾಟಕ್ಕೆ ಮುಕ್ತ ಅವಕಾಶಗಳುಂಟು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.jk-logo-justkannada-logo

ಎಪಿಎಂಸಿ ಕಾಯ್ದೆ ಮಂಡನೆ ಕುರಿತು ಮಾತನಾಡಿದ ಅವರು, ಎ.ಪಿ.ಎಂ.ಸಿ.ಯಲ್ಲಿ ಒಂದು ವೇಳೆ ಶೋಷಣೆ ಆದರೆ ದಲ್ಲಾಳಿಗಳ ಕಾಟ ವಿಪರೀತವಾದರೆ ಖಾಸಗಿಯವರಿಗೆ ಅಥವಾ ಬೇರೆ ಕಂಪನಿಗಳಿಗೆ ಬೆಳೆಗಳನ್ನು ಮಾರಬಹುದು. ಅದೇ ರೀತಿ ಖಾಸಗಿಯವರು ಒಂದು ವೇಳೆ ಶೋಷಣೆಗೆ ಮುಂದಾದರೆ ಎ.ಪಿ.ಎಂ.ಸಿ.ಗೆ ರೈತರು ಬೆಳೆಗಳನ್ನು ಮಾರಿ ಹೆಚ್ಚಿನ ಲಾಭ ಪಡೆಯಬಹುದು ಎಂದು ವಿವರಿಸಿದ್ದಾರೆ.

ನಾನು ಕೂಡ ರೈತನಾಗಿದ್ದು, ಈ ಹಿಂದೆ ನಾನು ಹೊಲದಲ್ಲಿ ಬೆಳೆದಂತಹ ಹತ್ತಿ, ಬೆಲ್ಲ ಮುಂತಾದ ಬೆಳೆಗಳನ್ನು ಎ.ಪಿ.ಎಂ.ಸಿ. ಗೆ ಮಾರಾಟ ಮಾಡಲು  ಸ್ವತಃ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಅಲ್ಲಿ ತಕ್ಷಣ ಮಾರಾಟವಾಗುತ್ತಿರಲ್ಲಿಲ್ಲಾ. ವಾರಗಟ್ಟಲೆ ಸತಾಯಿಸುತ್ತಿದ್ದರು. ನಮ್ಮ ಉತ್ಪನ್ನಗಳನ್ನು ಅವರು ತೆಗೆದುಕೊಂಡು ಕೇವಲ ಮುಂಗಡ ಹಣವನ್ನು ಮಾತ್ರ ಕೊಟ್ಟು ಕಳುಹಿಸುತ್ತಿದ್ದರು ಎಂದು ಬೇಸರವ್ಯಕ್ತಪಡಿಸಿದರು.Prevention-Exploitation-Farmers-Assembly-DCM Laxman Savadi-Justification

ಅಷ್ಟೇ ಮಾತ್ರವಲ್ಲದೇ, ಯದ್ವಾತದ್ವಾ ಕಮಿಷನ್ ಗಳನ್ನು ದಲ್ಲಾಳಿಗಳು ಪಡೆಯುತ್ತಿದ್ದರು. ನಮಗೆ ಕೊಟ್ಟ ಮುಂಗಡಗಳ ಮೇಲೆಯೂ  ಬಡ್ಡಿಯನ್ನು ಹಾಕುತ್ತಿದ್ದರು. ಇದು ದಲ್ಲಾಳಿಗಳ ಶೋಷಣೆ ಆಗಿತ್ತು. ಆದರೆ, ಇದನ್ನು ತಪ್ಪಿಸಲು ಈಗ ನಾವು ಮಂಡಿಸುತ್ತಿರುವ ಎ.ಪಿ.ಎಂ.ಸಿ. ಕಾಯ್ದೆಯು ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದು ಡಿಸಿಎಂ ಸವದಿ ಹೇಳಿದರು.

ಒಟ್ಟಾರೆ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ರೈತರನ್ನು ಬಚಾವ್ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕ್ರಮ ಇದಾಗಿದೆ. ಇದರಲ್ಲಿ ಯಾವುದೇ ರೀತಿಯ ಬಾಹ್ಯ ಪ್ರಭಾವ ನಡೆದಿಲ್ಲ ಎಂದು ಸವದಿಯವರು ಸಮರ್ಥಿಸಿಕೊಂಡಿದ್ದಾರೆ.

key words : Prevention-Exploitation-Farmers-Assembly-DCM Laxman Savadi-Justification