ಪ್ರತಿಷ್ಠಿತ ಅಲ್ ಇಂಗ್ಲೆಂಡ್ ಷಟಲ್: ಸೆಮಿಫೈನಲ್ ಗೆ ಪಿ.ವಿ.ಸಿಂಧು ಎಂಟ್ರಿ

ಬರ್ಮಿಂಗ್‍ಹ್ಯಾಮ್, ಮಾರ್ಚ್ 20, 2021 (www.justkannada.in): ಪ್ರತಿಷ್ಠಿತ ಅಲ್ ಇಂಗ್ಲೆಂಡ್ ಷಟಲ್ ಮಹಿಳಾ ಸಿಂಗಲ್ ಸೆಮಿಫೈನಲ್‍ಗೆ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಎಂಟ್ರಿ ಪಡೆದಿದ್ದಾರೆ.

-ಜಪಾನ್‍ನ ಅಖನೆ ಯಮಗುಚಿ ವಿರುದ್ಧ ಗೆಲುವಿನ ನಗೆ ಬೀರಿರುವ ಸಿಂಧು ನಾಲ್ಕರ ಘಟ್ಟ ತಲುಪಿದ್ದಾರೆ.

ಸಿಂಧು ಕ್ವಾರ್ಟರ್‍ಫೈನಲ್‍ನಲ್ಲಿ ದೃಢಸಂಕಲ್ಪದೊಂದಿಗೆ ಹೋರಾಡಿ 16.-21, 21-16, 21-19 ಅಂತರದ ಗೆಲವು ಸಾಧಿಸಿ ಸೆಮಿಫೈನಲ್ ತಲುಪಿದ್ದಾರೆ.

ಜಪಾನ್ ಆಟಗಾರ್ತಿಯರ ವಿರುದ್ಧ ಭಾರತೀಯರು ಅನೇಕ ಭಾರಿ ಸೋಲು ಅನುಭವಿಸಿದ್ದರು. ಯಮಗುಚಿ ವಿರುದ್ಧವೇ ಸಿಂಧು ಅನೇಕ ಬಾರಿ ಸೋಲು ಅನುಭವಿಸಿದ್ದರು.