ಸ್ವಚ್ಛತೆಯಲ್ಲಿ ಮೈಸೂರು ನಂಬರ್ ಒನ್ ಸ್ಥಾನಕ್ಕಾಗಿ ಸಿದ್ಧತೆ: ಕಸ ಸಂಗ್ರಹಿಸುತ್ತಾ ಓಡುವ ‘ಮಹಾ ಮೈಸೂರು ಪ್ಲಾಗತಾನ್ ಸ್ಪರ್ಧೆ’ಗೆ ಚಾಲನೆ….

ಮೈಸೂರು,ಜ,5,2020(www.justkannada.in): ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಹಿನ್ನಲೆ. ಸ್ವಚ್ಛತೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರನ್ನ ನಂಬರ್ ಒನ್ ಸ್ಥಾನಕ್ಕೇರಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದ್ದು ಇದರ ಅಂಗವಾಗಿ ಮಹಾ ಮೈಸೂರು ಪ್ಲಾಗತಾನ್ ಕಾರ್ಯಕ್ರಮ ಆಯೋಜನೆ ಮಾಡಿದೆ.

ಕಸ ಸಂಗ್ರಹಿಸುತ್ತಾ ಓಡುವ ‘ಮಹಾ ಮೈಸೂರು ಪ್ಲಾಗತಾನ್ ಸ್ಪರ್ಧೆ’ಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಿರಿಯ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಚಾಲನೆ ನೀಡಿದರು.  ಪ್ಲಾಗತಾನ್ ಗೂ ಮುನ್ನ ಬೀದಿ ನಾಟಕದ ಮ‌ೂಲಕ ಸ್ವಚ್ಚ ಸರ್ವೇಕ್ಷಣಾ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಸ್ಪರ್ಧಿಗಳು ಡಿಜೆ ಸಾಂಗ್ಸ್ ಗೆ ಸಕ್ಕತ್ ಸ್ಟೆಪ್ ಹಾಕಿದರು.

ಪ್ಲಾಗತಾನ್ ಸ್ಪರ್ಧೆಯಲ್ಲಿ ಸಾರ್ವಜನಿಕರು ಓಡುತ್ತಾ ಕಸ ಸಂಗ್ರಹಿಸುವ ಕಾರ್ಯಕ್ರಮ ಇದಾಗಿದೆ. ಹೆಚ್ಚು ಕಸ ಸಂಗ್ರಹಿಸುವ ಸ್ಪರ್ಧಿಗೆ 10 ಸಾವಿರ ಬಹುಮಾನ. 20 ಸ್ಪರ್ಧಿಗಳಿಗೆ 500ರೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಸ್ಪರ್ಧಿಗಳು 3 ಕಿಮೀ ಕಸ ಸಂಗ್ರಹಿಸುತ್ತಾ  ಮೂರು ಮಾರ್ಗಗಳಲ್ಲಿ ಓಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೃಷ್ಣೇಗೌಡ, ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಗಡೆ, ಅಂತರಾಷ್ಟ್ರೀಯ ಯೋಗಪಟು ಖುಷಿ ಸೇರಿ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

Key words: Preparing – Mysore- number one -position –cleanliness-Plagaton- Competition