ಮೈಸೂರು ದಸರಾ ಮಹೋತ್ಸಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಕೆಟ್ಟಿರುವ ವಿದ್ಯುತ್ ಬಲ್ಬ್ ಗಳ ಬದಲಾವಣೆ…

kannada t-shirts

ಮೈಸೂರು,ಸೆ,14,2019(www.justkannada.in): ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತ ಅರಮನೆಯಲ್ಲೂ ಸಿದ್ದತಾ ಕಾರ್ಯ ಬರದಿಂದ ಸಾಗಿದೆ.

ಮೈಸೂರು ಅರಮನೆ ವಿಶ್ವದಲ್ಲೇ ಖ್ಯಾತಿ ಗಳಿಸಿದ್ದು ತನ್ನ ವಿಶಿಷ್ಟವಾದ ವಿದ್ಯುತ್ ದೀಪಗಳಿಂದ ಹೌದು ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುವ ವಾಸ್ತುಶಿಲ್ಪವಾಗಿದೆ. ದಸರಾ ಸಂದರ್ಭದಲ್ಲಿ ಪ್ರತಿದಿ‌ನ ಸಂಜೆ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಅರಮನೆ ಜಗಮಗಿಸುತ್ತದೆ. ಇದನ್ನ ನೋಡಲು ಎಲ್ಲಿಲ್ಲದ ಆನಂದ. ಇನ್ನು ಇದೇ ವೇಳೇ ಅರಮನೆ ಅಂದವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ.

ಹೀಗಾಗಿ ದೀಪಾಲಂಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಅರಮನೆಯಲ್ಲಿ  ಸುಮಾರು 15000 ಕೆಟ್ಟಿರುವ ಬಲ್ಬ್ ಗಳನ್ನು ಬದಲಿಸಲು ಕಾರ್ಯ ಸಾಗುತ್ತಿದೆ. ಅರಮನೆ ಹಾಗೂ ಕಾಂಪೌಂಡ್‍ಗೆ 1 ಲಕ್ಷ ಬಲ್ಬ್ ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಬ್ ಗಳನ್ನು ಬದಲಿಸಲಾಗುತ್ತದೆ. ಪ್ರತಿಬಾರಿಯೂ ಅರಮನೆಗೆ ಅಳವಡಿಸಿರುವ ಬಲ್ಬ ಗಳಲ್ಲಿ ಶೇ.10ರಷ್ಟು ಬಲ್ಬ್‍ ಗಳನ್ನು ಬದಲಿಸಲಾಗುತ್ತಿದೆ.

ಆದರೆ ಇದೇ ಮೊದಲ ಬಾರಿಗೆ ಈ ಬಾರಿ 15ರಷ್ಟು ಬಲ್ಬ್‍ ಗ ಳನ್ನು ಬದಲಿಸಲಾಗುತ್ತಿದ್ದು, ಕಾರ್ಯನಿರ್ವಹಿಸದ ಹಾಗೂ ಕೆಟ್ಟು ಹೋಗಿರುವ 15 ಸಾವಿರ ಬಲ್ಬ್  ಗಳನ್ನು ತೆಗೆಯಲಾಗುತ್ತಿದೆ. ಎತ್ತರದಲ್ಲಿರುವ ಬಲ್ಬ್‍ಗ ಳನ್ನು ಕ್ರೇನ್ ಹಾಗೂ ಏಣಿಗಳ ಸಹಾಯದಿಂದ  ರೀಪ್ಲೇಸ್ ಮಾಡಲಾಗುತ್ತಿದೆ.

ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಅರಮನೆಗೆ ಅಳವಡಿಸಿರುವ ಸಾವಿರಾರು ಬಲ್ಬ್ ಗಳು ಕೆಟ್ಟು ಹೋಗಿದ್ದವು. ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಬಲ್ಬ್‍ಗಳನ್ನು ಬದಲಾಯಿಸಲು ಕ್ರೇನ್ ಬಳಸಲು ಸಿದ್ದತೆ ನಡೆಯುತ್ತಿದೆ.

Key words: Preparing – Mysore Dasara –  Replacement – electric -bulbs.

 

website developers in mysore