ನಾಳೆ ಗ್ರಾ.ಪಂ ಚುನಾವಣೆಗೆ ಮೈಸೂರಿನಲ್ಲಿ ಸಿದ್ಧತೆ: ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ‌ ತೆರೆ…

ಮೈಸೂರು,ಡಿಸೆಂಬರ್,21,2020(www.justkannada.in): ಗ್ರಾಮ ಪಂಚಾಯತಿ ಚುನಾವಣಾ ಕಣ ರಂಗೇರಿದ್ದು, ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು  ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ‌ ತೆರೆ ಬಿದ್ದಿದ್ದು ಇಂದು ಮನೆ ಮನೆ ಭೇಟಿಗೆ ಮಾತ್ರ ಅವಕಾಶವಿದೆ.Teachers,solve,problems,Government,bound,Minister,R.Ashok

ನಾಳೆ‌ ಮೊದಲ‌ ಹಂತದ ಮತದಾನ ಪ್ರಕ್ರಿಯೆಗೆ ಮೈಸೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯ 5 ತಾಲ್ಲೂಕಿನ 148 ಪಂಚಾಯತಿಗಳಿಗೆ ‌ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ‌  6475 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಹುಣಸೂರು, ಕೆ.ಆರ್‌.ನಗರ, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಹಾಗೂ ಸರಗೂರು ತಾಲೂಕಿನಲ್ಲಿ ಚುನಾವಣೆ ನಡೆಯಲಿದ್ದು,  ನಾನ ತಂತ್ರಗಳ ಮೂಲಕ ಮತದಾರರನ್ನ ಸೆಳೆಯಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.preparing-0-tomorrow0-gp-election-mysore-first-stage-publicity

ಇನ್ನು ಇಂದು ಐದು ತಾಲೂಕಿನಲ್ಲಿ ಆಯಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ನಾಳೆ ಮಂಗಳವಾರ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಲಿದ್ದು, ಇಂದು ಸಂಜೆಯೇ ಬೂತ್ ಅಧಿಕಾರಿಗಳು ಮತಗಟ್ಟೆಗಳತ್ತ ತೆರಳಲಿದ್ದಾರೆ. ಡಿಸೆಂಬರ್ 30ಕ್ಕೆ  ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

english summary….

Preparations on in Mysuru for GP elections tomorrow: First phase campaigning comes to end
Mysuru, Dec. 21, 2020 (www.justkannada.in): The first phase of voting of the gram panchayat elections will be held tomorrow. Campaigning of candidates of the first phase came to an end in Mysuru yesterday, with candidates going door-to-door seeking votes.preparing-0-tomorrow0-gp-election-mysore-first-stage-publicity
Elections for 148 panchayats in five taluks in Mysuru District will be held tomorrow and 6475 candidates will check their luck.
The panchayats where elections will be held in Mysuru District tomorrow include Hunsuru, K.R. Nagara, Periyapatna, H.D. Kote, and Saraguru Taluks. Voting will begin at 7 am. Counting of votes will be held on December 30.
Keywords: GP elections/ voting/ public campaigning ends in Mysuru

Key words: Preparing 0 tomorrow0 GP election – Mysore-first stage -publicity.